ಜೆರುಸಲೇಂ: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಂಘರ್ಷ ಮುಂದುವರೆದಿದೆ. ಈ ನಡುವೆ ಹಮಾಸ್ ಉಗ್ರರಿಗೆ ಒತ್ತೆಯಾಳು ಆಗಿದ್ದ ಆರು ಜನ ಇಸ್ರೇಲ್ ಪ್ರಜೆಗಳ ಶವ ಪತ್ತೆಯಾಗಿದೆ.
ದಕ್ಷಿಣ ಗಾಜಾ ಪಟ್ಟಿಯ ಟನಲ್‌ವೊಂದರಲ್ಲಿ ಶವಗಳು ಪತ್ತೆಯಾಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಸ್ರೇಲಿ – ಅಮೆರಿಕನ್ ಪ್ರಜೆ ಹರ್ಶ್ ಗೋಲ್ಡ್ ಪೊಲೀನ್ ಸೇರಿದಂತೆ ಆರು ಜನರ ಗುರುತನ್ನು ಇಸ್ರೇಲಿ ಸೇನೆ ಪತ್ತೆ ಮಾಡಿದೆ. ಗಾಜಾ ಪಟ್ಟಿಯ ರಫಾ ಪ್ರದೇಶದಿಂದ ಮೃತರ ಶವಗಳನ್ನು ವಶಕ್ಕೆ ಪಡೆಯಲಾಗಿದೆ.
ಯುದ್ಧದ ಸಮಯದಲ್ಲಿ ಗಾಜಾದಲ್ಲಿ ವಶಪಡಿಸಿಕೊಂಡ ಆರು ಮಂದಿಯಲ್ಲಿ ಇಸ್ರೇಲಿ-ಅಮೆರಿಕನ್ ಒತ್ತೆಯಾಳುಗಳ ದೇಹವೂ ಸೇರಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಶನಿವಾರ ಹೇಳಿಕೆ ನೀಡಿದ ಸ್ವಲ್ಪ ಸಮಯದ ನಂತರ ಇಸ್ರೇಲ್ ಇದನ್ನು ದೃಢಪಡಿಸಿದೆ. ರಫಾ ನಗರದ ಕೆಳಗಿರುವ ಸುರಂಗದಲ್ಲಿ, ಹಮಾಸ್ ಹೊಂದಿದ್ದ ಆರು ಒತ್ತೆಯಾಳುಗಳ ಮೃತದೇಹಗಳನ್ನು ಇಸ್ರೇಲಿ ಪಡೆಗಳು ವಶಪಡಿಸಿಕೊಂಡವೆ. ಒತ್ತೆಯಾಳುಗಳಲ್ಲಿ ಒಬ್ಬ ಅಮೆರಿಕನ್ ಪ್ರಜೆ, ಹರ್ಷ್ ಗೋಲ್ಡ್ ಬರ್ಗ್-ಪೋಲಿನ್ ಎಂದು ನಾವು ಈಗ ದೃಢಪಡಿಸಿದ್ದೇವೆ ಎಂದು ಬೈಡೆನ್ ಹೇಳಿದ್ದರು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.