ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (Indian Space Research Organisation – ISRO) 103 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಭಾರತದ ಪ್ರಮುಖ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಕೆಲಸ ಮಾಡಲು ಆಸಕ್ತಿ ಹೊಂದಿರುವವರಿಗೆ ಅವಕಾಶವನ್ನು ಒದಗಿಸುತ್ತದೆ.
ವೈದ್ಯಕೀಯ ಅಧಿಕಾರಿ-SD, ವಿಜ್ಞಾನಿ/ ಇಂಜಿನಿಯರ್-SC, ತಾಂತ್ರಿಕ ಸಹಾಯಕ, ವಿಜ್ಞಾನಿ ಸಹಾಯಕ ಮತ್ತು ಇತರರು. ಆಸಕ್ತ ಅಭ್ಯರ್ಥಿಗಳು ಇಸ್ರೋದ ಅಧಿಕೃತ ವೆಬ್‌ಸೈಟ್ isro.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅ.9 ಕೊನೆಯ ದಿನ
ವೈದ್ಯಕೀಯ ಅಧಿಕಾರಿ-ಎಸ್‌ಡಿ, ವೈದ್ಯಕೀಯ ಅಧಿಕಾರಿ-ಎಸ್‌ಸಿ, ಸೈಂಟಿಸ್ಟ್ ಇಂಜಿನಿಯರ್-ಎಸ್‌ಸಿ, ತಾಂತ್ರಿಕ ಸಹಾಯಕ, ವಿಜ್ಞಾನಿ ಸಹಾಯಕ, ತಂತ್ರಜ್ಞ-ಬಿ, ಡ್ರಾಫ್ಟ್ಸ್ಮನ್-ಬಿ ಮತ್ತು ಸಹಾಯಕ (ಅಧಿಕೃತ ಭಾಷೆ) ಒಳಗೊಂಡಿದೆ.
ವೈದ್ಯಕೀಯ ಅಧಿಕಾರಿ (SD): 18 ರಿಂದ 35 ವರ್ಷಗಳು
ವೈದ್ಯಕೀಯ ಅಧಿಕಾರಿ (SC): 18 ರಿಂದ 35 ವರ್ಷಗಳು
ವಿಜ್ಞಾನಿ ಇಂಜಿನಿಯರ್ (SC): 18 ರಿಂದ 30 ವರ್ಷಗಳು
ತಾಂತ್ರಿಕ ಸಹಾಯಕ: 18 ರಿಂದ 35 ವರ್ಷಗಳು
ವೈಜ್ಞಾನಿಕ ಸಹಾಯಕ: 18 ರಿಂದ 35 ವರ್ಷಗಳು
ತಂತ್ರಜ್ಞ (ಬಿ): 18 ರಿಂದ 35 ವರ್ಷಗಳು
ಡ್ರಾಫ್ಟ್ಸ್‌ಮನ್ (ಬಿ): 18 ರಿಂದ 35 ವರ್ಷಗಳು ಒಳಗಿನವರು ಅರ್ಜಿ ಸಲ್ಲಿಸಬಹುದು.
ವೇತನ
ಅರ್ಜಿಯ ಆಧಾರದ ಮೇಲೆ 21,700 ರೂ. ನಿಂದ 2,08,700 ರೂ. ವರೆಗೆ ವೇತನ ಸಿಗಲಿದೆ. ಇಸ್ರೋಗೆ ಸೇರಲು ಮತ್ತು ಭಾರತದ ಬಾಹ್ಯಾಕಾಶ ಕಾರ್ಯಾಚರಣೆಗೆ ಕೊಡುಗೆ ನೀಡಲು ಆಸಕ್ತರು ಕೆಲಸಕ್ಕೆ ಸೇರಬಹುದು.
ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗುವುದು. ಆಸಕ್ತರು ಅಧಿಕೃತ ವೆಬ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.