ಬೆಂಗಳೂರು: ಭಾರತಕ್ಕೆ ಗೌರವ ತರುವ ಕೆಲಸವನ್ನ ಕರ್ನಾಟಕದಿಂದ ಇಸ್ರೋ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ರೋ ವಿಜ್ಞಾನಿಗಳು ಸಾಹಸ, ಪ್ರಯೋಗ ಎಲ್ಲ ಮಾಡುತ್ತಿದ್ದಾರೆ. ಇಸ್ರೋ ಕೈಗೊಂಡಿರುವ ಸೂರ್ಯಯಾನಕ್ಕೆ ಶುಭಕೋರುತ್ತೇನೆ. ಯಶಸ್ವಿಯಾಗಲಿ, ದೇಶದ ಜನ ಪ್ರಾರ್ಥನೆ ಮಾಡುತ್ತಿದ್ದಾರೆ. ಇಡೀ ವಿಶ್ವದಲ್ಲೇ ಇಸ್ರೋ ಶ್ರಮದ ಬಗ್ಗೆ ಮಾತಾಡುತ್ತಿದ್ದಾರೆ ಎಂದು ತಿಳಿಸಿದರು.
ಇಸ್ರೋ ಸಂಸ್ಥೆ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡಿದ್ದು, ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ ಐ1 ಮಿಷನ್ ಲಾಂಚ್ ಮಾಡುತ್ತಿದೆ. ಇದಕ್ಕಾಗಿ ಈಗಾಗಲೇ ಕ್ಷಣಗಣನೆ ಪ್ರಾರಂಭವಾಗಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಜನ ಕಾಯುತ್ತಿದ್ದಾರೆ.