ಅತಿಯಾದ ಒತ್ತಡದ ಜೀವನಶೈಲಿ ಹಾಗೂ ಅನಾರೋಗ್ಯಕಾರಿ ಆಹಾರ ಪದ್ಧತಿಯಿಂದಾಗಿ, ಇಂದಿನ ದಿನಗಳಲ್ಲಿ ಹೆಚ್ಚಿನವರಿಗೆ ಹೈಬಿಪಿ ಹಾಗೂ ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ.
ಇಂದಿನ ದಿನಗಳಲ್ಲಿ ಹೆಚ್ಚಿನವರಿಗೆ ಅಧಿಕ ರಕ್ತದೊತ್ತಡ ಹಾಗೂ ಹೃದಯ ಕಾಯಿಲೆ ಎನ್ನುವುದು ಒಂದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ! ಅದರಲ್ಲೂ ಸಣ್ಣ-ವಯಸ್ಸಿನವರಿಗೆ ಈ ಕಾಯಿಲೆ ಕಾಣಿಸಿ ಕೊಳ್ಳುತ್ತಿರುವುದು ನಿಜಕ್ಕೂ ಆತಂಕ ಮೂಡಿಸುತ್ತಿದೆ.
ಇದಕ್ಕೆ ಪ್ರಮುಖ ಕಾರಣ ಅತಿಯಾದ ಮಾನ ಸಿಕ ಒತ್ತಡ, ಬಿಡುವಿಲ್ಲದ ಒತ್ತಡದ ಕೆಲಸ ಕಾರ್ಯಗಳು, ದೈಹಿಕ ಚಟು ವಟಿಕೆ ಇಲ್ಲದಿರುವುದು, ಅನಾರೋಗ್ಯಕಾರಿ ಅಹಾರ ಪದ್ಧತಿ ಅನುಸ ರಿಸುವುದು ಹಾಗೂ ಅಸಮತೋಲಿತ ಜೀವನ ಶೈಲಿಯಿಂದಾಗಿ, ಇಂತಹ ದೀರ್ಘಕಾಲದ ಕಾಯಿಲೆಗಳು ಮನುಷ್ಯನನ್ನು ಆವರಿಸಿ ಬಿಡುತ್ತದೆ ಎಂಬುದನ್ನು ಅರ್ಥ ಮಾಡಿ ಕೊಳ್ಳುವುದು ಬಹಳ ಮುಖ್ಯವಾಗಿದೆ.
ಈ ಎರಡು ಕಾಯಿಲೆ ಕಾಣಿಸಿಕೊಂಡ ಮೇಲೆ ಆಹಾರ ಪದ್ಧತಿ ಹೇಗಿರಬೇಕು?
ಅಧಿಕ ರಕ್ತದೊತ್ತಡ ಹಾಗೂ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆ ಇರುವವರು, ತಮ್ಮ ದೈನಂದಿನ ಆಹಾರ ಪದ್ಧತಿ ಯನ್ನು ಅಚ್ಚುಕಟ್ಟಾಗಿ ಕಾಯ್ದುಕೊಳ್ಳಬೇಕು. ವೈದ್ಯರು ನೀಡಿರುವ ಸಲಹೆಗಳು ಅನುಸರಿಸುವುದರ ಜೊತೆಗೆ, ಎಣ್ಣೆ ಯಾಂಶ ಇರುವ ತಿಂಡಿ-ತಿನಿಸುಗಳು ಹಾಗೂ ಉಪ್ಪಿ ನಾಂಶ ಇರುವ ಆಹಾರ ಪದಾರ್ಥಗಳಿಂದ ದೂರ ವಿರಬೇಕು.
ಯಾಕೆಂದ್ರೆ ಇಂತಹ ಆಹಾರ ಪದಾರ್ಥಗಳು ರಕ್ತ ದೊತ್ತಡ ಕಾಯಿಲೆಯನ್ನು ನಿಯಂತ್ರಣ ತಪ್ಪುವಂತೆ ಮಾಡುತ್ತದೆ, ಇದರಿಂದ ಹೃದಯಕ್ಕೂ ಸಮಸ್ಯೆ ಉಂಟಾಗಿ ಬಿಡುತ್ತದೆ.
ಬಿಪಿ ಹಾಗೂ ಹೃದಯದ ಸಮಸ್ಯೆ ಇದ್ದವರು ಒಣಮೀನು ತಿನ್ನಬಾರದು!
ಮಳೆಗಾಲದಲ್ಲಿ ತಾಜಾ ಹಸಿ ಮೀನುಗಳು ಮಾರುಕಟ್ಟೆ ಯಲ್ಲಿ ಸರಿಯಾಗಿ ಸಿಗದೇ ಇರುವುದರಿಂದ, ಬೇಸಿಗೆಯಲ್ಲಿ ಒಂದಷ್ಟು ಮೀನುಗಳನ್ನು ಉಪ್ಪಿನ ಮಿಶ್ರಣದೊಂದಿಗೆ, ನೀರಿನಾಂಶ ಇರದಂತೆ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ಸಂಸ್ಕರಿಸಿ ಇಟ್ಟಿ ರುತ್ತಾರೆ!
ಇದರಿಂದ ಮೀನುಗಳು ವರ್ಷಗಳವರೆಗೂ ಕೂಡ ಕೆಡು ವುದಿಲ್ಲ. ಸಾಮಾನ್ಯವಾಗಿ ಇಂತಹ ಮೀನುಗಳನ್ನು ಮಳೆಗಾಲದಲ್ಲಿ ಹೆಚ್ಚಾಗಿ, ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ.
ಆದರೆ ನಿಮಗೆ ಗೊತ್ತಿರಲಿ, ಇದರಲ್ಲಿ ಅಧಿಕ ಪ್ರಮಾಣ ದಲ್ಲಿ ಉಪ್ಪಿನಾಂಶ ಬೆರೆಸಿರುವುದರಿಂದ, ಈಗಾಗಲೇ ಬಿಪಿ ಹಾಗೂ ಹೃದಯದ ಸಮಸ್ಯೆಯಿಂದ ಬಳಲುತ್ತಿರುವವರು, ಇಂತಹ ಮೀನುಗಳನ್ನು ತಿನ್ನದೇ ಇರುವುದು ಒಳ್ಳೆಯದು.
ತಜ್ಞರು ಹೇಳುವ ಪ್ರಕಾರ
ಆರೋಗ್ಯ ತಜ್ಞರು ಹೇಳುವ ಹಾಗೆ ಒಣಮೀನುಗಳಲ್ಲಿ ತನ್ನಲ್ಲಿ ಅಧಿಕ ಪ್ರಮಾಣದ ಸೋಡಿಯಂ ಅಂಶ ಕಂಡು ಬರುವುದರ ಜೊತೆಗೆ ಮನುಷ್ಯನ ಆರೋಗ್ಯಕ್ಕೆ ಬೇಕಾ ಗುವ ಒಮೆಗಾ-3, ವಿಟಮಿನ್ಸ್, ಮಿನರಲ್ ಹಾಗೂ ಖನಿ ಜಾಂಶಗಳು, ತುಂಬಾನೇ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ.
ಎಲ್ಲಾಕ್ಕಿಂತ ಡೇಂಜರ್, ಇಂತಹ ಮೀನಿನಲ್ಲಿ ಉಪ್ಪಿ ನಾಂಶ ಅಧಿಕಪ್ರಮಾಣದಲ್ಲಿ ರಕ್ತದೊತ್ತಡ ಹಾಗೂ ಹೃದಯದ ಸಮಸ್ಯೆಯಿಂದ ಬಳಲುತ್ತಿರುವವರು, ಇಂತಹ ಮೀನುಗಳಿಂದ ದೂರವಿದ್ದರೆ ಒಳ್ಳೆಯದು.
ಈ ವಿಷ್ಯ ನಿಮಗೆ ಗೊತ್ತಿರಲಿ…
ಒಂದು ವೇಳೆ ಮನುಷ್ಯನಿಗೆ ಇದ್ದಕ್ಕಿದ್ದಂತೆ ರಕ್ತದೊತ್ತಡದ ಅಥವಾ ಹೈಬಿಪಿ ಸಮಸ್ಯೆ ಹೆಚ್ಚಾದರೆ ಅದರಿಂದ ಹೃದ ಯದ ಪ್ರಮುಖ ರಕ್ತನಾಳಗಳಿಗೆ ಹಾನಿಯುಂಟಾಗುತ್ತದೆ!
ಕೊನೆಗೆ ಇದೇ ಕಾರಣ ದಿಂದ ಹೃದಯದ ಭಾಗಕ್ಕೆ ಸರಿ ಯಾಗಿ ರಕ್ತ ಸಂಚಾರವಾಗದೆ, ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ.
ಹೀಗಾಗಿ ಬಿಪಿ ಜೊತೆಗೆ ಹೈದಯಕ್ಕೆ ಸಂಬಂಧಪಟ್ಟ ಕಾಯಿಲೆ ಇದ್ದವರು ಪ್ರಮುಖವಾಗಿ ಉಪ್ಪಿನಾಂಶ ಹಾಗೂ ಎಣ್ಣೆಯಾಂಶ ಇರುವ ಆಹಾರಗಳಿಂದ ದೂರವಿದ್ದರೆ ಒಳ್ಳೆಯದು.
ಇದರ ಜೊತೆಗೆ ರಸ್ತೆಬದಿಯ ಜಂಕ್ ಫುಡ್, ಸಂಸ್ಕರಿಸಿದ ಆಹಾರ ಪದಾರ್ಥಗಳಿಂದ ಕೂಡ ದೂರವಿರಬೇಕು. ಇಂತಹ ಆಹಾರ ಪದಾರ್ಥಗಳು ಬಾಯಿಗೆ ರುಚಿ ನೀಡಿ ದರೂ, ಆರೋಗ್ಯಕ್ಕೆ ತುಂಬಾನೇ ಡೇಂಜರ್!
ನಿಮಗೆ ಗೊತ್ತಿರಲಿ, ಜಂಕ್‌ಫುಡ್‌ಗಳಲ್ಲಿ ಸ್ಯಾಚುರೇಟೆಡ್ ಕೊಬ್ಬಿನಾಂಶ ಹಾಗೂ ಉಪ್ಪಿನ ಅಂಶ ಅಪಾರ ಪ್ರಮಾಣ ದಲ್ಲಿ ಕಂಡು ಬರುವುದರಿಂದ, ಅಧಿಕ ರಕ್ತದೊತ್ತಡ ಮತ್ತು ಹೃದಯದ ಕಾಯಿಲೆಗಳ ಅಪಾಯ ಜಾಸ್ತಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ.