ಆಸ್ಟ್ರೇಲಿಯಾ: ಹೌದು ಇನ್ಮುಂದೆ ಅಪರಾಧ ನಡೆದ ಸ್ಥಳದಲ್ಲಿ ತಮ್ಮ ಬೆರಳಚ್ಚು ಹಾಗೂ ಇತರ ಸಾಕ್ಷ್ಯಗಳು ಸಿಗದಂತೆ ಎಚ್ಚರಿಕೆ ವಹಿಸುವ ಅಪರಾಧಿಗಳ ಆಟ ಇನ್ಮುಂದೆ ನಡೆಯಲ್ಲ!
ಏಕೆಂದರೆ ಆಸ್ಟ್ರೇಲಿಯಾದ ಪ್ಲಿಂಡರ್ಸ್ ವಿವಿ ಸಂಶೋಧಕರು ಹೊಸ ವಿಧಾನವನ್ನು ಕಂಡುಹಿಡಿದಿದ್ದಾರೆ. ಮಾನವ DNAಯನ್ನು ಅಪರಾಧದ ಸ್ಥಳದಲ್ಲಿ ಗಾಳಿಯಿಂದ ಸಂಗ್ರಹಿಸಿ, ವಿಶ್ಲೇಷಿಸಲಾಗುತ್ತದೆ.
ಜನ ಮಾತನಾಡುತ್ತಿರಲಿ ಅಥವಾ ಉಸಿರಾಡುತ್ತಿರಲಿ, ಅವರ DNA ಕುರುಹುಗಳು ಗಾಳಿಯಲ್ಲಿ ಬೆರೆತಿರುತ್ತವೆ. ಹೀಗೆ ಸಂಗ್ರಹಿಸಿದ DNA ಮೂಲಕ ಅಪರಾಧಿಗಳನ್ನು ಪತ್ತೆ ಹಚ್ಚಬಹುದಂತೆ.