ಬೆಂಗಳೂರು: ಕಾವೇರಿ ನೀರು ಹೋರಾಟಗಾರರು ಏನಾದರೂ ನಿಮ್ಮಿಂದ ರಾಜೀನಾಮೆ ಕೇಳಿದ್ರಾ ಅಥವಾ ಅಧಿಕಾರ ಕೇಳಿದ್ದಾರಾ? ನೀರು ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಕ್ಕೆ ಬಂಧಿಸಿದ್ದೀರಿ. ಈಗ ಕರ್ನಾಟಕದಲ್ಲಿ ಪೊಲೀಸ್ ಸರ್ಕಾರ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾವು ಅಧಿಕಾರದಲ್ಲಿದ್ದಾಗ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿಲ್ಲ. ಆದರೆ ಈಗ ಕಾಂಗ್ರೆಸ್ ಸರ್ಕಾರ ಹಿಂದೆಂದೂ ಮಾಡದ ರೀತಿ ಪೊಲೀಸ್ ಕಾರ್ಯಾಚರಣೆ ಮಾಡಿಸಿದೆ ಎಂದರು.
ಇನ್ನು ಬಂದ್ ಯಶಸ್ವಿ ಆಗಬಾರದು ಎಂಬುದು ಸರ್ಕಾರದ ಉದ್ದೇಶವಾಗಿತ್ತು. ಆದರೆ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಬಂದ್ಗೆ ಸಹಕಾರ ಕೊಟ್ಟಿದ್ದಾರೆ. ಬಂದ್ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
				
															
                    
                    
                    
                    

































