ಮುಂಬೈ : ರತ್ನಗಿರಿಯ ಒಂದು ವರ್ಷದ ವೇದ ಪರೇಶ್ ಸರ್ಫಾರೆ ಎಂಬ ಪುಟ್ಟ ಬಾಲಕಿ ಇತ್ತೀಚೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ (IBR) ನಲ್ಲಿ ಸ್ಥಾನ ಪಡೆದುಕೊಂಡು, 100 ಮೀಟರ್ ಈಜುವ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ಧಾಳೆ.
ವೇದಾ ಕೇವಲ 1 ವರ್ಷ, 9 ತಿಂಗಳು ಮತ್ತು 10 ದಿನಗಳ ವಯಸ್ಸಿನಲ್ಲಿ, 25 ಮೀಟರ್ 22 ಮೀಟರ್ ಅಳತೆಯ ಪುರಸಭೆ ಈಜುಕೊಳದಲ್ಲಿ 100 ಮೀಟರ್ (4 ಸುತ್ತುಗಳು) ಈಜುವುದರಲ್ಲಿ ಕೇವಲ 10 ನಿಮಿಷ 8 ಸೆಕೆಂಡುಗಳಲ್ಲಿ ಯಶಸ್ಸು ಸಾಧಿಸಿದ್ದಾಳೆ.
IBR ಅಧಿಕೃತವಾಗಿ ಆಕೆಯ ಸಾಧನೆಯನ್ನು ಗುರುತಿಸಿದೆ ಮತ್ತು ಈ ವಯಸ್ಸಿನಲ್ಲಿ ಈ ಸಾಧನೆ ಗಮನಾರ್ಹ ಮೈಲಿಗಲ್ಲು ಎಂದು ಕರೆದಿದೆ. ವೇದಾ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈಜುವ ವೀಡಿಯೊಗಳನ್ನು ಹಂಚಿಕೊಂಡಿದ್ದು, ಪುಟ್ಟ ಮಗು ಆತ್ಮವಿಶ್ವಾಸದಿಂದ ಪೂಲ್‌ಗೆ ಧುಮುಕುವುದು ಮತ್ತು ಸುಲಭವಾಗಿ ಸುತ್ತುಗಳನ್ನು ಪೂರ್ಣಗೊಳಿಸುವ ದೃಶ್ಯಗಳನ್ನು ಪ್ರತಿಬಿಂಬಿಸುತ್ತಿದೆ.






























