ಬೆಂಗಳೂರು: ದಕ್ಷಿಣ ಕನ್ನಡ ಹಾಗೂ ಹಾಸನ ಗಡಿ ಭಾಗದಲ್ಲಿರುವ ಚಾರಣಿಗರ ಪ್ರಮುಖ ತಾಣ ಕುಮಾರ ಪರ್ವತಕ್ಕೆ ನಿಷೇಧ ಹೇರಲಾಗಿದೆ. !
ಏಕೆಂದರೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಹಿಂದುಗಡೆ ಇರುವ ಈ ಪರ್ವತಕ್ಕೆ ಮಳೆಗಾಲ ಕಾರಣಕ್ಕಾಗಿ ಮೇ ತಿಂಗಳಿನಿಂದ ಸೆ. 29ರ ವರೆಗೆ ಚಾರಣಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಸೆ.30ಕ್ಕೆ ಮತ್ತೆ ಪ್ರವೇಶ ಪ್ರಾರಂಭವಾಗಿತ್ತು. ಆದರೆ, ಇಲ್ಲಿ ಪುನಃ ಮಳೆಯಾಗುತ್ತಿರುವುದರಿಂದ ಮುಂದಿನ ಆದೇಶದವರೆಗೂ ಚಾರಣ ನಿಷೇಧಿಸಲಾಗಿದೆ. !