ದಾವಣಗೆರೆ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸದ ಉದ್ದಿಮೆ ನಡೆಸುತ್ತಿರುವ ಉದ್ದಿಮೆದಾರರು ಬರುವ ಇದೇ ಏಪ್ರಿಲ್ 6 ರಂದು ಶ್ರೀ ರಾಮನವಮಿ ಹಾಗೂ ಏ.10 ರಂದು ಮಹಾವೀರ ಜಯಂತಿ ಪ್ರಯುಕ್ತ ಪ್ರಾಣಿ ವಧೆ, ಪ್ರಾಣಿ ಹಾಗೂ ಮೀನಿನ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.
ಹಾಗಾಗಿ ಆಯಾ ದಿನಾಂಕಗಳಂದು ಮಾಂಸ ಮಾರಾಟ ಮಾಡಬಾರದು. ತಪ್ಪಿದಲ್ಲಿ ಮಹಾನಗರ ಪಾಲಿಕೆ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.