ಆಸಕ್ತಿ ಇದ್ದರೂ ಯಾವ ಬ್ಯುಸಿನೆಸ್ ಶುರು ಮಾಡಿದರ್ರ್ ಒಳ್ಳೆಯ ಲಾಭ ಬರುತ್ತದೆ..? ಎಂದು ಅವರಿಗೆ ಸರಿಯಾಗಿ ಐಡಿಯಾ ಇಲ್ಲದೇ, ಯಾವುದೇ ಬ್ಯುಸಿನೆಸ್ ಶುರು (Own Business) ಮಾಡದೇ ಇರುತ್ತಾರೆ. ಹೀಗಿರುವವರಿಗೆ ಇಂದು ಒಂದು ಒಳ್ಳೆಯ ಬ್ಯುಸಿನೆಸ್ ಐಡಿಯಾ ತಿಳಿಸಿಕೊಡಲಿದ್ದೇವೆ. ಈ ಬ್ಯುಸಿನೆಸ್ ಶುರು ಮಾಡಿದರೆ, ತಿಂಗಳಿಗೆ ನಿಮಗೆ ₹30,000 ಆದಾಯ ಬರೋದ್ರಲ್ಲಿ ಡೌಟೇ ಬೇಡ.
ಹೌದು, ಬ್ಯುಸಿನೆಸ್ ಮಾಡಲು ಆಸಕ್ತಿ ಇರುವವರಿಗೆ ಸರಿ ಹೊಂದುವಂಥ ಈ ಬ್ಯುಸಿನೆಸ್ ಐಸ್ ಫ್ಯಾಕ್ಟರಿ ಬ್ಯುಸಿನೆಸ್ ಆಗಿದೆ. ಹೌದು, ಇದು ಲಾಭದಾಯಕವಾದ ಬ್ಯುಸಿನೆಸ್ ಆಗಿದ್ದು, ಐಸ್ ಈಗ ಎಲ್ಲಾ ಕಡೆ ಬೇಕಾಗುವ ವಸ್ತು.
ಮನೆಗಳಲ್ಲಿ, ಜ್ಯುಸ್ ಸೆಂಟರ್, ರೆಸ್ಟೋರೆಂಟ್ ಹಾಗೂ ಇನ್ನಿತರ ಇಂಥ ಸೆಂಟರ್ ಗಳಲ್ಲಿ ಐಸ್ ಕ್ಯೂಬ್ ಗಳ ಅಗತ್ಯ ಇದ್ದೆ ಇರುತ್ತದೆ. ಕಾರ್ಯಕ್ರಮಗಳಿಗೂ ಕೂಡ ಐಸ್ ಬೇಕೇ ಬೇಕು. ಹಾಗಾಗಿ ಒಳ್ಳೆಯ ಲಾಭ ಪ್ಯಾಡ್ಐಸ್ ಫ್ಯಾಕ್ಟರಿ ಬ್ಯುಸಿನೆಸ್ ಶುರು ಮಾಡುವುದು ಒಳ್ಳೆಯ ಬ್ಯುಸಿನೆಸ್ ಐಡಿಯಾ ಆಗಿದೆ.
ಈ ಸಬ್ಸಿಡಿ ಯೋಜನೆಯಲ್ಲಿ ಸಿಗುತ್ತೆ 10 ಲಕ್ಷ ಲೋನ್! ನಮ್ಮಲ್ಲಿ ಬಹಳಷ್ಟು ಜನಕ್ಕೆ ಈ ಬಗ್ಗೆ ಗೊತ್ತಿಲ್ಲ ಬೇಸಿಗೆ ಕಾಲದಲ್ಲಿ ಹೆಚ್ಚು ಬಿಸಿಲು, ದಾಹ ಇದ್ದಾಗ, ತಂಪು ಮಾಡಿಕೊಳ್ಳಲು ಹಣ್ಣಿನ ಜ್ಯುಸ್ ಹಾಗೂ ಇನ್ನಿತರ ಪದಾರ್ಥಗಳಲ್ಲಿ ಕೂಡ ಐಸ್ ಬಳಕೆ ಮಾಡಲಾಗುತ್ತದೆ. ಇದು ನೀವು ಹೆಚ್ಚು ಸ್ಟ್ರೆಸ್ ಮಾಡಿಕೊಳ್ಳದೇ, ಸುಲಭವಾಗಿ ಮಾಡಬಹುದಾದಂಥ ಬ್ಯುಸಿನೆಸ್ ಆಗಿದ್ದು, ಹೇಗೆ ಶುರು ಮಾಡುವುದು ಎಂದು ನೋಡುವುದಾದರೆ. ಈ ಬ್ಯುಸಿನೆಸ್ ಶುರು ಮಾಡುವುದಕ್ಕೆ, ಆರಂಭದಲ್ಲಿ ನೀವು ಸಮೀಪದ ಆಡಳಿತ ಕಚೇರಿಗೆ ಹೋಗಿ ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ನಿಮಗೆ ಫ್ರೀಜರ್, ನೀರು ಹಾಗೂ ಕರೆಂಟ್ ಮುಖ್ಯವಾಗಿ ಬೇಕಾಗುತ್ತದೆ.
ಇದಿಷ್ಟು ವಸ್ತುಗಳು ನಿಮ್ಮ ಬಳಿ ಇದ್ದರೆ ಸಾಕು, ಹಲವು ಡಿಸೈನ್ ಗಳಲ್ಲಿ ಐಸ್ ಕ್ಯೂಬ್ ತಯಾರಿಸಬಹುದು. ಈ ಬ್ಯುಸಿನೆಸ್ ಶುರು ಮಾಡುವುದಕ್ಕೆ ಶುರುವಿನಲ್ಲಿ ನಿಮಗೆ 1 ಲಕ್ಷ ರೂಪಾಯಿಯವರೆಗು ಹೂಡಿಕೆ ಮಾಡಬೇಕಾಗುತ್ತದೆ. ನಿಮಗೆ ಸಿಗುವ ಲಾಭ ಎಷ್ಟು ಎಂದರೆ, 1 ಲಕ್ಷಕ್ಕೆ 30 ಸಾವಿರ ವರೆಗು ಶುರುವಿನಲ್ಲೇ ಲಾಭ ಪಡೆಯಬಹುದು.
ಮಳೆ ಮತ್ತು ಚಳಿಗಾಲದಲ್ಲಿ ಸಾಮಾನ್ಯ ವ್ಯಾಪಾರ ಎಂದು ಅನ್ನಿಸಿದರು ಸಹ, ಬೇಸಿಗೆ ವೇಳೆ ಹೆಚ್ಚು ಲಾಭ ಗಳಿಸುತ್ತೀರಿ.. ಬೇಸಿಗೆ ಕಾಲದಲ್ಲಿ ನಿಮಗೆ ₹50,000 ವರೆಗು ಲಾಭ ಸಿಗುತ್ತದೆ. ಹಾಗೆಯೇ ನಿಮ್ಮ ಬ್ಯುಸಿನೆಸ್ ಅನ್ನು ಚೆನ್ನಾಗಿ ಮಾರ್ಕೆಟಿಂಗ್ ಮಾಡುವ ಮೂಲಕ ಹೆಚ್ಚು ಲಾಭ ಗಳಿಸಬಹುದು. ಒಳ್ಳೆಯ ರೆಸ್ಟೋರೆಂಟ್ ಗಳು, ಕೆಫೆಗಳು, ಜ್ಯುಸ್ ಸೆಂಟರ್ ಗಳು ಇಲ್ಲೆಲ್ಲಾ ಟೈ ಅಪ್ ಮಾಡಿಕೊಂಡು, ಐಸ್ ಸಪ್ಲೈ ಮಾಡಬಹುದು. ಇದರಿಂದಾಗಿ ಬ್ಯುಸಿನೆಸ್ ಇಂಪ್ರೂವ್ ಆಗುತ್ತದೆ. ಜೊತೆಗೆ ಒಳ್ಳೆಯ ಲಾಭ ಕೂಡ ಸಿಗುತ್ತದೆ.