ಚಿತ್ರದುರ್ಗ : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಷ್ಠಾಪನೆಯಾಗಲಿರುವ ಹಿಂದೂ ಮಹಾ ಗಣಪತಿ ಬುಧವಾರ ಪುರ ಪ್ರವೇಶಿಸಿತು.
ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಗುರುಪೀಠದಿಂದ ಮೆರವಣಿಗೆ ಮೂಲಕ ಹೊರಟ ಹಿಂದೂ ಮಹಾ ಗಣಪತಿ ಹೆದ್ದಾರಿಯಿಂದ ಚಳ್ಳಕೆರೆ ಗೇಟ್ ಮೂಲಕ ಪಂಚಾಚಾರ್ಯ ಕಲ್ಯಾಣ ಮಂಟಪ ಪಕ್ಕದಲ್ಲಿರುವ ಪೆಂಡಾಲ್ಗೆ ಆಗಮಿಸಿತು.
ಕೇಸರಿ ಭಾವುಟ, ಜೈಶ್ರೀರಾಮ್ ಎಂದು ಬರೆದಿದ್ದ ಹನುಮನ ಭಾವಚಿತ್ರವುಳ್ಳ ಭಾವುಟಗಳು, ಶಾರದಾ ಬ್ರಾಸ್ ಬ್ಯಾಂಡ್ನ ವಾದ್ಯ ಮೆರವಣಿಗೆಯಲ್ಲಿ ರಾರಾಜಿಸಿದವು. ನೂರಾರು ಬೈಕ್ಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರು ಕುಣಿದು ಕುಪ್ಪಳಿಸಿದರು. ಚಳ್ಳಕೆರೆ ಗೇಟ್ನಲ್ಲಿ ಡೊಳ್ಳು, ತಮಟೆ ಮೂಲಕ ಹಿಂದೂ ಮಹಾ ಗಣಪತಿಯನ್ನು ಬರಮಾಡಿಕೊಳ್ಳಲಾಯಿತು.
ಗರುಡನ ಮೇಲೆ ವಿರಾಜಮಾನವಾಗಿರುವ ಹಿಂದೂ ಮಹಾಗಣಪತಿಯನ್ನು ವೀಕ್ಷಿಸಲು ಸಹಸ್ರಾರು ಜನ ಜಮಾಯಿಸಿದ್ದರು.
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಪ್ರಮುಖರು ಹಿಂದೂ ಮಹಾ ಗಣಪತಿ ಪುರ ಪ್ರವೇಶದಲ್ಲಿ ಭಾಗವಹಿಸಿದ್ದರು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.