ಬೆಂಗಳೂರು : ಟ್ರಾಫಿಕ್ ರೂಲ್ಸ್ ಗಳನ್ನು ಬ್ರೇಕ್ ಮಾಡಿದ್ದಕ್ಕೆ ಯಾವುದೇ ವಾಹನದ ಮೇಲೆ ಹೆಚ್ಚು ಅಂದರೆ 20 ರಿಂದ 30 ಸಾವಿರ ಫೈನ್ ಇರಬಹುದು ಆದರೆ ಇಲ್ಲೊಂದು ದ್ವಿಚಕ್ರ ವಾಹನ ಮೇಲೆ ಬರೋಬ್ಬರಿ 1,34,000 ರೂಪಾಯಿಯ ದಂಡ ಇದೆ. ಪೊಲೀಸರಿಗೆ ಶಾಕ್ ಆಗಿದೆ.
ಜಯನಗರದ ಏಳುಮಲೈ ಅವರ ಟೂ ವೀಲರ್‌ನ ವಿರುದ್ಧ 225 ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಅವರ ಗಾಡಿಗೆ ಈಗಿನ ಬೆಲೆ ಒಂದು 25 ಸಾವಿರ ಇರಬಹುದು ಆದರೆ ದಾಖಲಾಗಿದ್ದು ಮಾತ್ರ 225 ಕೇಸ್ 1,34,000 ರೂ. ದಂಡ ಬಿದ್ದಿದೆ.
ನಗರದಲ್ಲಿ ಅತಿ ಹೆಚ್ಚು ನಿಯಮ ಉಲ್ಲಂಘನೆ ಮಾಡಿರೋ ಪ್ರಕರಣ ಹೆಚ್ಚುತ್ತಾ ಇದ್ದಾಗ ಈ ಟೂ ವೀಲರ್ ಪತ್ತೆಯಾಗಿದೆ. ಬಳಿಕ ಈ ಗಾಡಿಯ ಮಾಲೀಕ ಏಳುಮಲೈ ಅವರಿಗೆ ಪೊಲೀಸರು ದಂಡದ ಮೊತ್ತವನ್ನು ಹೇಳಿದ್ದಾರೆ.
ಸದ್ಯ 1,34,000 ರೂ. ಬದಲಾಗಿ 10,000 ರೂ. ದಂಡವನ್ನು ಸ್ಥಳದಲ್ಲಿ ಕಟ್ಟಿಸಿಕೊಂಡು ಬಾಕಿ ದಂಡವನ್ನು ಪಾವತಿಸಲು ಏಳುಮಲೈಗೆ ಜಯನಗರ ಸಂಚಾರಿ ಪೊಲೀಸರು ಸೂಚಿಸಿದ್ದಾರೆ.