ಈ ಜಗತ್ತಿನಲ್ಲಿ ನಮ್ಮ ನಿಜವಾದ ಸಂಗಾತಿಯೆಂದರೆ, ಅದು ನಮ್ಮ ದೇಹವಾಗಿದೆ. ಆದ್ದರಿಂದಲೇ ‘ಆರೋಗ್ಯವಂತ ದೇಹವೇ ದೊಡ್ಡ ಸಂಪತ್ತು’ ಎಂದು ಹೇಳಲಾಗುತ್ತದೆ. ನಾವು ನಮ್ಮನ್ನು ಆರೋಗ್ಯವಾಗಿ ಮತ್ತು ಸದೃಢವಾಗಿಡಲು ಜಿಮ್ ಗೆ ಹೋಗುತ್ತೇವೆ, ದುಬಾರಿ ಆಹಾರಗಳನ್ನು ತಿನ್ನುತ್ತೇವೆ, ಪೌಷ್ಟಿಕತಜ್ಞರಿಂದ ಸಲಹೆ ಪಡೆಯುತ್ತೇವೆ. ಆದರೆ ಕೆಲವು ಸಣ್ಣ ಸಲಹೆಗಳನ್ನು ಮರೆತು ಬಿಡಿ. ಪ್ರತಿದಿನ ಈ ಸಲಹೆಗಳನ್ನು ಅನುಸರಿಸಿದರೆ, ದೇಹವು ಹೆಚ್ಚಾಗಿ ಆರೋಗ್ಯಕರವಾಗಿರುತ್ತದೆ.
ಉತ್ತಮ ಆರೋಗ್ಯಕ್ಕೆ (Health) ಅತ್ಯಗತ್ಯವಾಗಿರುವ ಈ ಸಲಹೆಗಳನ್ನು ಸ್ವತಃ ತಜ್ಞರೆ ಸಲಹೆ ನೀಡಿದ್ದಾರೆ. ಈ ಸಲಹೆಗಳನ್ನು ಪಾಲಿಸಿ ಉತ್ತಮ ಆರೋಗ್ಯ ವನ್ನು ಪಡೆಯಿರಿ.
ಊಟ ಮಾಡುವಾಗ ಈಗೀಗ ಎಲ್ಲರೂ ಸಾಮಾನ್ಯವಾಗಿ ಟೇಬಲ್ – ಚೇರ್ ಬಳಕೆ ಮಾಡಿ ಊಟ ಮಾಡುತ್ತಾರೆ. ಆದರೆ ಇದು ಸರಿಯಾದ ಕ್ರಮ ಅಲ್ಲ. ಊಟವನ್ನು ಕೆಳಗೆ ಕುಳಿತು ಕೈಗಳಿಂದ ತಿನ್ನಬೇಕು. ಆಹಾರವನ್ನು ಚೆನ್ನಾಗಿ ಅಗಿಯಿರಿ. ಆವಾಗ ಮಾತ್ರ ಆಹಾರ (Food) ಸಂಪೂರ್ಣವಾಗಿ ದೇಹಕ್ಕೆ ಸೇರುತ್ತದೆ.