ಚಾಮರಾಜನಗರ: ದೀಪಾವಳಿ ಬಂತೆಂದರೆ ಸಡಗರ-ಸಂಭ್ರಮ. ಆದರೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ 6 ಊರುಗಳಾದ ವೀರನಪುರ, ಬನ್ನಿತಾಳಪುರ, ಇಂಗಲವಾಡಿ, ಮಾಡ್ರಹಳ್ಳಿ, ಮಳವಳ್ಳಿ ಹಾಗೂ ನೇನೆಕಟ್ಟೆ ಗ್ರಾಮಗಳಲ್ಲಿ ಬಲಿಪಾಡ್ಯಮಿ ಬುಧವಾರ ಬಂದರೆ ಮಾತ್ರ ಹಬ್ಬ ಆಚರಿಸುವುದು ಸಂಪ್ರದಾಯ.
ಹೀಗಾಗಿ, ಅಲ್ಲಿ ನಾಳೆಯ ಬದಲಿಗೆ ಮುಂದಿನ ಬುಧವಾರ ಹಬ್ಬ ಆಚರಿಸುತ್ತಾರೆ. ಒಂದು ವೇಳೆ ಬೇರೆ ದಿನ ಹಬ್ಬ ಆಚರಿಸಿದರೆ ಊರಿಗೆ ಕೆಡುಕಾಗಲಿದೆ ಎಂಬ ನಂಬಿಕೆ ಅಲ್ಲಿನ ಜನರದ್ದು. ಇದೇ ಕಾರಣಕ್ಕೆ ಹಬ್ಬವನ್ನು 1 ವಾರ ಮುಂದೂಡಿದ್ದಾರೆ.
(ಸಾಂದರ್ಭಿಕ ಚಿತ್ರ)