ಭಯೋತ್ಪಾದಕರ ದೇಶ ಎಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ಪಾಕಿಸ್ತಾನದಲ್ಲಿ ಈಗ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಉಗ್ರರ ಅಟ್ಟಹಾಸಕ್ಕೆ 10ಕ್ಕೂ ಹೆಚ್ಚು ಪೊಲೀಸರು ಬಲಿಯಾಗಿದ್ದಾರೆ. ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ಮೂರೇ ಮೂರು ದಿನಗಳು ಬಾಕಿಯಿರುವ ಬೆನ್ನಲ್ಲೇ ಉಗ್ರರು ದಾಳಿ ಮಾಡಿದ್ದಾರೆ. ಉಗ್ರರ ಅಡಗುತಾಣವಾಗಿರೋ ಪಾಕಿಸ್ತಾನದ ವಿರುದ್ಧವೇ ಉಗ್ರರು ತಿರುಗಿಬಿದ್ದಿದ್ದಾರೆ.
ಅದರಲ್ಲೂ ಸಾರ್ವತ್ರಿಕ ಚುನಾವಣೆಗೆ ಮೂರು ದಿನ ಇರುವಾಗಲೇ ಅಟ್ಟಹಾಸ ಮೆರೆದಿರೋ ಟೆರರಿಸ್ಟ್ಗಳು ರಕ್ತದೋಕುಳಿ ಆಡಿದ್ದಾರೆ. ಪಾಕಿಸ್ತಾನದ ದೇರಾ ಇಸ್ಮಾಯಿಲ್ ಖಾನ್‌ನ ಚೋಡ್ವಾನ್ ಪೊಲೀಸ್ ಠಾಣೆ ಮೇಲೆ ಟೆರರಿಸ್ಟ್ ದಾಳಿ ಮಾಡಿದ್ದಾರೆ.. ಉಗ್ರರ ಅಟ್ಟಹಾಸಕ್ಕೆ 10 ಪೊಲೀಸರು ದುರ್ಮರಣ ಹೊಂದಿದ್ರೆ, 6ಕ್ಕೂ ಹೆಚ್ಚು ಪೊಲೀಸರಿಗೆ ಗಂಭೀರಗಾಯವಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾರೆ. ಫೆಬ್ರವರಿ 8ರಂದು ಪಾಕ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಗೆ ಮೂರು ದಿನಗಳ ಮೊದಲು ಈ ದಾಳಿ ನಡೆದಿದೆ. ಕಳೆದ ಕೆಲವು ದಿನಗಳಲ್ಲಿ ಖೈಬರ್ ಪಖ್ತುಂಖ್ವಾದ ಗಡಿ ಪ್ರದೇಶಗಳಲ್ಲಿ ಉಗ್ರರ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಸ್ಥಳೀಯರಲ್ಲಿ ಆತಂಕಕ್ಕೂ ಕಾರಣವಾಗಿದೆ. ಇನ್ನು ಹಲವಾರು ವರ್ಷಗಳಿಂದ ಉಗ್ರರಿಗೆ ಅಡಗಿಕೊಳ್ಳಲು ನೆಲೆ ನೀಡಿದ್ದ ಪಾಕಿಸ್ತಾನದ ಮೇಲೆ ಉಗ್ರರು ತಿರುಗಿ ಬಿದ್ದಿರೋದು ಸ್ಥಳೀಯರಲ್ಲಿ ಭಯವನ್ನ ಹುಟ್ಟುಹಾಕಿದೆ.