ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ಮಾಡುವ ಅವಕಾಶವನ್ನು ಇನ್ನಷ್ಟು ಕಾಲ ವಿಸ್ತರಿಸಲಾಗಿದೆ. ಜೂನ್ 14ರವರೆಗೂ ಇದ್ದ ಕಾಲಾವಕಾಶ ಈಗ ಸೆಪ್ಟಂಬರ್ 14ರವರೆಗೂ ಮುಂದುವರಿದಿದೆ.
ಈ ಕುರಿತು ಯುಐಡಿಎಐ ಸೂಚನೆ ನೀಡಿದೆ. ಆಧಾರ್ ಕಾರ್ಡ್ ಹೊಂದಿರುವವರು ಶುಲ್ಕ ಇಲ್ಲದೇ ಸೆಪ್ಟಂಬರ್ 14ರವರೆಗೂ ಆನ್ಲೈನ್ನಲ್ಲಿ ಮಾಹಿತಿ ಅಪ್ಡೇಟ್ ಮಾಡಬಹುದಾಗಿದೆ.
ಸೆಪ್ಟಂಬರ್ 14ರ ಬಳಿಕವೂ ಆನ್ ಲೈನ್ನಲ್ಲಿ ಆಧಾರ್ ಅಪ್ಡೇಟ್ ಮಾಡಬಹುದಾದರೂ ₹50 ಶುಲ್ಕ ನೀಡಬೇಕಾಗುತ್ತದೆ.