ಆಧಾರ್‌ನ ಆಡಳಿತ ಮಂಡಳಿಯಾಗಿರುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆಧಾರ್ ಹೊಂದಿರುವವರ ನವೀಕರಣದ ಗಡುವನ್ನು ಮತ್ತೆ ವಿಸ್ತರಿಸಿದೆ.
ನೀವು ಇದೀಗ ನಿಮ್ಮ ಆಧಾರ್ ವಿವರಗಳನ್ನು ಡಿಸೆಂಬರ್ 14ರವರೆಗೆ ಉಚಿತವಾಗಿ ಅಪ್‌ಡೇಟ್ ಮಾಡಬಹುದು. ಜೂನ್ ತಿಂಗಳಲ್ಲಿ ಆದ ವಿಸ್ತರಣೆಯ ಬಳಿಕ ಇದು ಎರಡನೇ ವಿಸ್ತರಣೆಯಾಗಿದೆ.
ಆಧಾರ್ ವಿವರಗಳನ್ನು ಉಚಿತವಾಗಿ ನವೀಕರಿಸುವ ಪ್ರಕ್ರಿಯೆಯು uidai ಆನ್‌ಲೈನ್ ಪೋರ್ಟಲ್ ಮೂಲಕ ಮಾತ್ರ ಲಭ್ಯವಿದೆ. ಆದರೆ, ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಲು ಉಚಿತ ಆಯ್ಕೆಯು ಲಭ್ಯವಿಲ್ಲ.