ಉಚಿತ ಯೋಜನೆಯ ಆಯಸ್ಸು ಸ್ವಲ್ಪ ದಿನ ಮಾತ್ರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರತಿಯೊಬ್ಬ ನಾಗರಿಕರ ಆದಾಯ ಹೆಚ್ಚಾಗಬೇಕು. ಉದ್ಯೋಗ ಸಿಗಬೇಕು. ಆರ್ಥಿಕತೆ ಹೆಚ್ಚಾಗಬೇಕು, ಆಗ ದೇಶ ಅಭಿವೃದ್ಧಿ ಆಗುತ್ತದೆ ಎಂದು ಮೋದಿ ಹೇಳಿದ್ದುಮ್ ಉಚಿತ ಯೋಜನೆಗಳು ಅಲ್ಪ ಕಾಲದ ಯೋಜನೆಗಳು ಎಂದರು.
ಇನ್ನು ಅನ್ನಭಾಗ್ಯ ಯೋಜನೆಯಡಿ ಕುಂಟು ನೆಪ ಹೇಳಿ ಅನೇಕರನ್ನು ದೂರ ಇಡುತ್ತಾರೆ ಎಂದು ನಾನು ಅವತ್ತೇ ಹೇಳಿದ್ದೆ. ಈಗ ಅದನ್ನೆ ಮಾಡಿದ್ದಾರೆ. ಕೇಂದ್ರ ಕೊಡುತ್ತಿರುವ 5 ಕೆಜಿ ಅಕ್ಕಿ ಕೂಡಾ ಕಡಿಮೆ ಮಾಡಿದ್ದಾರೆ. 3 ಕೆಜಿ ಅಕ್ಕಿ ಕೊಟ್ಟು ಉಳಿದದ್ದು ಜೋಳ, ರಾಗಿ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.