ಉಚಿತ ಹೊಲಿಗೆ ಯಂತ್ರ ಸೇರಿದಂತೆ 10 ಸಬ್ಸಿಡಿ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.
ರಾಜ್ಯದಲ್ಲಿ ವಿವಿಧ ವರ್ಗದಲ್ಲಿ ಹಿಂದುಳಿದ ಜನರಿಗೆ ಅರ್ಥಿಕವಾಗಿ ನೆರವಾಗಲು ನಿಗಮ ಮಂಡಳಿಗಳ ಮೂಲಕ ಪ್ರತಿ ವರ್ಷ ಅಭಿವೃದ್ದಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತದೆ.
ಇದರಂತೆ ಈ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಪಡೆಯಲು ಈ ಹಿಂದೆ ನಿಗದಿಪಡಿಸಿದ ಕೊನೆಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ಇದರ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
10 ಸಬ್ಸಿಡಿ ಯೋಜನೆಗಳ ವಿವರ:
1) ಡಿ, ದೇವರಾಜ ಅರಸು ಸ್ವಯಂ ಉದ್ಯೋಗ ನೇರಸಾಲ/ಕಾಯಕಕಿರಣ/ಪಂಚವ್ಯಕ್ತಿ ಯೋಜನೆ.
2) ಗಂಗಾ ಕಲ್ಯಾಣ/ಜೀವಜಲ/ಜಲಭಾಗ್ಯ ಯೋಜನೆ.
3) ಸ್ವಾವಲಂಭಿ ಸಾರಥಿ ಯೋಜನೆ.
4) ಅರಿವು ಶೈಕ್ಷಣಿಕ ಸಾಲ/ಬಸವಬೆಳಗು ಯೋಜನೆ(ಹೊಸತು ಮತ್ತು ನವೀಕರಣ)
5) ವಿದೇಶಿ ವಿಶ್ವ ವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ.
6) ಬ್ಯಾಂಕ್ ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಯೋಜನೆ.
7) ಮರಾಠ ಮಿಲ್ಟ್ರಿ ಹೋಟೆಲ್ ಯೋಜನೆ.
8) ಭೋಜನಾಲಯ ಕೇಂದ್ರ ಯೋಜನೆ
9) ವಿಭೂತಿ ನಿರ್ಮಾಣ ಘಟಕ.
10) ಉಚಿತ ಹೊಲಿಗೆ ಯಂತ್ರ ಯೋಜನೆ.
ಯಾವೆಲ್ಲ ನಿಗಮಗಳಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ?
1) ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ.
2) ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ.
3) ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮ.
4) ಕರ್ನಾಟಕ ಉಪ್ಪಾರ ಲಿಂಗಾಯತ ಅಭಿವೃದ್ದಿ ನಿಗಮ.
5) ಕರ್ನಾಟಕ ವೀರಶೈವ ಅಲೆಮಾರಿ ಅಭಿವೃದ್ದಿ ನಿಗಮ.
6) ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ.
7) ಕರ್ನಾಟಕ ಮಡಿವಾಳ ಮಾಚೀದೇವಾ ಅಭಿವೃದ್ದಿ ನಿಗಮ.
8) ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮ.
9) ಕರ್ನಾಟಕ ಸವಿತಾ ಸಮಾಜ ಅಭಿವೃದ್ದಿ ನಿಗಮ.
10) ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ದಿ ನಿಗಮ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಈ ಮೊದಲು ಮೇಲೆ ತಿಳಿಸಿರುವ ನಿಗಮ ಯೋಜನೆಗಳಿಗೆ ಅರ್ಜಿ ಸಲ್ಲಿಸಲು 31 ಆಗಸ್ಟ್ 2024 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು ಇನ್ನು ಹಲವು ಅರ್ಹ ಅರ್ಜಿದಾರರು ಅರ್ಜಿ ಸಲ್ಲಿಸುವುದು ಬಾಕಿಯಿರುವ ಕಾರಣ ಈಗ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 15 ಸೆಪ್ಟೆಂಬರ್ 2024ಗೆ ಮುಂದೂಡಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ ಮಾಹಿತಿ:
ಅರ್ಹ ಆಸಕ್ತ ಸಾರ್ವಜನಿಕರು ಕೊನೆಯ ದಿನಾಂಕದ ಒಳಗಾಗಿ ಸಲ್ಲಿಕೆ ಮಾಡಬೇಕಾದ ದಾಖಲೆಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್/ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.