ಉಡುಪಿ: ಜಿಲ್ಲೆಯಿಂದ ಇಸ್ರೇಲ್ ಗೆ ಹೋಂ ನರ್ಸ್ ಕೆಲಸಕ್ಕೆ ನೂರಾರು ಮಂದಿ ತೆರಳಿದ್ದು ಇಲ್ಲಿ ಕುಟುಂಬವರ್ಗಕ್ಕೆ ಆತಂಕ ಎದುರಾಗಿದೆ.ಈ ಸಂಬಂಧ ಮಾತನಾಡಿದ ಉಡುಪಿ ಡಿ.ಸಿ ಡಾ. ವಿದ್ಯಾ ಕುಮಾರಿ,ಇಸ್ರೇಲ್ ನಲ್ಲಿ ನಮ್ಮವರಿಗೆ ಸಮಸ್ಯೆಯಾದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.ಉಡುಪಿ ಜಿಲ್ಲಾಡಳಿತಕ್ಕೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.ಪರಿಸ್ಥಿತಿ ಅವಲೋಕನ ಮಾಡಿ ಇನ್ನೆರಡು ದಿನದಲ್ಲಿ ಮಾಹಿತಿ ಬರಬಹುದು.ಸ್ಥಳೀಯವಾಗಿ ಕೂಡ ಯಾವುದೇ ಸಮಸ್ಯೆಗಳು ಆದ ಬಗ್ಗೆ ಯಾರೂ ಕೂಡ ಮಾಹಿತಿ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಸರ್ಕಾರದ ನಿರ್ದೇಶನದಂತೆ ಉಡುಪಿ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ ಎಂದ ಅವರು,ಇಸ್ರೇಲ್ ನಲ್ಲಿ ಸಂಕಷ್ಟದಲ್ಲಿ ಇದ್ದರೆ ರಾಯಭಾರಿ ಕಚೇರಿಯನ್ನು ಸಂಪರ್ಕ ಮಾಡಬಹುದು. ಕುಟುಂಬದವರು ಜಿಲ್ಲಾಡಳಿತಕ್ಕೆ ಅಲ್ಲಿನ ಪರಿಸ್ಥಿತಿಯನ್ನು ತಿಳಿಸಬಹುದು.ಉಡುಪಿ ಜಿಲ್ಲಾಡಳಿತ ಸರ್ಕಾರದ ಸೂಚನೆಯಂತೆ ನಡೆದುಕೊಳ್ಳುತ್ತದೆ. ಇಸ್ರೇಲ್ ನಲ್ಲಿ ಎಷ್ಟು ಜನ ಇದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ನಮ್ಮಲ್ಲಿಲ್ಲ.ಉಡುಪಿ ಜಿಲ್ಲಾಡಳಿತದ ಬಳಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಮ್ ಇದೆ,ಜಿಲ್ಲಾಡಳಿತ ಕಂಟ್ರೋಲ್ ರೂಂ ಸಿಬ್ಬಂದಿಗೆ ಸೂಚನೆಯನ್ನು ಕೊಟ್ಟಿದೆ. ಈವರೆಗೆ ಉಡುಪಿ ಜಿಲ್ಲೆಯಿಂದ ಯಾವುದೇ ಕುಟುಂಬ ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.