ಉಡುಪಿ: ನ.16- 17 ಕುಂತಳನಗರದಲ್ಲಿ ‘ಬೃಹತ್ ಉದ್ಯೋಗ ಮೇಳ’

ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್, ಕುಂತಳನಗರ ಇದರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ವತಿಯಿಂದ ಎಂಆರ್‌ಜಿ ಗ್ರೂಪ್‌ನ ಪ್ರಾಯೋಜಕತ್ವದಲ್ಲಿ ಸತತ 3ನೇ ಬಾರಿಗೆ ಎರಡು ದಿನಗಳ ‘ಬೃಹತ್ ಉದ್ಯೋಗ ಮೇಳ’ ವನ್ನು ಇದೇ ನವೆಂಬರ್ 16 ಮತ್ತು 17ರಂದು ಮಣಿಪುರ ಗ್ರಾಮದ ಕುಂತಳನಗರದ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ ಎಂದು ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ತಿಳಿಸಿದರು.

ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.16ರಂದು ಬೆಳಿಗ್ಗೆ 9ಗಂಟೆ ಯಿಂದ ಅಭ್ಯರ್ಥಿಗಳ ರಿಜಿಸ್ಟ್ರೇಷನ್ ಆರಂಭಗೊಳ್ಳಲಿ ದೆ. ಬೆಳಿಗ್ಗೆ 9.45ಕ್ಕೆ ಎಂಆರ್‌ಜಿ ಗ್ರೂಪ್‌ನ ಛೇರ್ಮನ್ ಡಾ.ಕೆ.ಪ್ರಕಾಶ್ ಶೆಟ್ಟಿ ಅವರು ಉದ್ಯೋಗ ಮೇಳವನ್ನು ಉದ್ಘಾಟಿಸಲಿದ್ದಾರೆ. ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್ ಬಲ್ಲಾಳ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ, ಬ್ರಿಜೇಶ್ ಚೌಟ, ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಯಶ್ಪಾಲ್ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎಂಎಲ್ ಸಿ ಐವನ್ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ. ನ.17ರಂದು ಬೆಳಿಗ್ಗೆ 12ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

Advertisement

ಪ್ರೊಗ್ರಾಮ್ ಡೈರೆಕ್ಟರ್ ಪ್ರೊ. ದಿವ್ಯಾರಾಣಿ ಪ್ರದೀಪ್ ಮಾತನಾಡಿ, ಐಟಿ, ಮೆಕ್ಯಾನಿಕಲ್, ಎಲೆಕ್ನಿಕಲ್, ಕಂಪ್ಯೂಟರ್ ಸೈನ್ಸ್, ಸಿವಿಲ್ ಮತ್ತು ಇನ್ನಿತರ ಬ್ರಾಂಚ್ ನಲ್ಲಿ ಇಂಜಿನಿಯರಿಂಗ್, ಡಿಪ್ಲೊಮೊ, ಐಟಿಐ ಹಾಗೂ ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸದ್ಯ ರಿಜಿಸ್ಟಾರ್ ಮಾಡಿದ ಕಂಪನಿಗಳ ಪ್ರಕಾರ ಇಂಜಿನಿಯರಿಂಗ್ ಫೀಲ್ಡ್ ಸುಮಾರು 1000 ಹುದ್ದೆಗಳಿವೆ. ಅಲ್ಲದೆ, ಬಿ.ಎ, ಬಿ. ಕಾಮ್, ಬಿ.ಎಸ್ಸಿ, ಬಿ. ಬಿಎಂ, ಬಿ.ಸಿ.ಎ ಮತ್ತು ಇನ್ನಿತರ ಡಿಗ್ರಿ ಮಾಡಿದವರಿಗೆ ಮತ್ತು ಎಂ. ಸಿ. ಎ, ಎಂ.ಬಿ.ಎ, ಎಂ. ಎಸ್ಸಿ, ಮಾಡಿದ ಅಭ್ಯರ್ಥಿಗಳಿಗೆ ಸುಮಾರು 500 ಕ್ಕಿಂತಲೂ ಹೆಚ್ಚು ಹುದ್ದೆಗಳಿವೆ. ಕಳೆದ ಎರಡು ಬಾರಿ ನಡೆದ ಉದ್ಯೋಗ ಮೇಳದಲ್ಲಿ 1300 ಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳಿಗೆ ಉತ್ತಮ ಕಂಪನಿಗಳಲ್ಲಿ ಉದ್ಯೋಗ ಸಿಕ್ಕಿದೆ. ಈ ಬಾರಿ 30 ಕಂಪೆನಿಗಳು ಭಾಗವಹಿಸುತ್ತಿದ್ದು, ಸುಮಾರು 1500 ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ ಎಂದರು.

ಸುಮಾರು 65 ಟೀಟರ್ ಹುದ್ದೆಗಳಿದ್ದು, B’ED M’SC ಮಾಡಿದವರಿಗೆ ಅವಕಾಶ ಇದೆ. ಒಟ್ಟು 1630 ಇಂಜಿನಿಯರಿಂಗ್ ಮತ್ತು ಇನ್ನಿತರ ಬೇರೆ ಬೇರೆ ಫೀಲ್ಡ್ ಗಳಿಗೆ 30 ಕಂಪನಿ ಗಳಲ್ಲಿ ವಿವಿಧ ಹುದ್ದೆಗಳಿಗೆ ಅವಕಾಶ ಇದೆ. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಉಚಿತ ಅವಕಾಶವಿದ್ದು, ಯಾವುದೇ ರಿಜಿಸ್ಟ್ರೇಷನ್ ಶುಲ್ಕ ಇರುವುದಿಲ್ಲ ಎಂದು ತಿಳಿಸಿದರು.ಇಂಜಿನಿಯರಿಂಗ್, Bsc, Bcom, BBA, MA, Mcom, MSc, MBA, MCA ಮತ್ತು ಇನ್ನಿತರ ಕಲಿತ ಮತ್ತು ಅಂತಿಮ ವರ್ಷದಲ್ಲಿ ಕಲಿಯುವ ವಿದ್ಯಾರ್ಥಿ ಗಳಿಗೆ ಇಂಟರ್ವ್ಯೂ‌ನಲ್ಲಿ ಭಾಗವಹಿಸಲು ಅವಕಾಶ ಇದೆ. ಪ್ರತಿಯೊಬ್ಬ ಅಭ್ಯರ್ಥಿಗಳಿಗೆ 5 ಕಂಪನಿಗಳಲ್ಲಿ ಇಂಟರ್‌ವ್ಯೂನಲ್ಲಿ ಭಾಗವಹಿಸಲು ಅವಕಾಶವಿದ್ದು, ಪ್ರತಿಯೊಬ್ಬರೂ 5 ಸೆಟ್ ಬಯೋ ಡಾಟಾ ತರಬೇಕೆಂದು ತಿಳಿಸಿದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement