ಉಡುಪಿ: ಶಿವಮೊಗ್ಗ ಗಲಭೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ಪೇಜಾವರ ಶ್ರೀಗಳು ,ಸಮಾಜದ ಸ್ವಾಸ್ಥ್ಯ ಕೆಡಿಸುವ ಕಾರ್ಯಕ್ಕೆ ಯಾರೂ ಕೈ ಹಾಕಬಾರದು ಎಂದು ಮನವಿ ಮಾಡಿದ್ದಾರೆ. ನಮ್ಮಲ್ಲಿ ನ್ಯಾಯಾಲಯಗಳಿವೆ. ಸರಕಾರ ಇದೆ.ಅವುಗಳ ಮೇಲೆ ಒತ್ತಡ ಹೇರಿ.ಅದು ಬಿಟ್ಟು ಕಾನೂನು ನ್ಯಾಯ ತೀರ್ಮಾನವನ್ನು ಪ್ರಜೆಗಳು ಕೈಗೆತ್ತಿಕೊಳ್ಳಬಾರದು. ಒಂದು ಬಾರಿ ಅಶಾಂತಿ ಸೃಷ್ಟಿಯಾದರೆ ಅದಕ್ಕೆ ಕೊನೆಯಿಲ್ಲ. ಪೊಲೀಸರ ಮೇಲೆ ಹಲ್ಲೆಯಾದ್ರೆ ಸರಕಾರ ಏನು ಮಾಡುತ್ತಿದೆ? ಪೊಲೀಸರ ಮೇಲೆ ಕಲ್ಲೆಸೆಯುತ್ತಿದ್ದಾರೆ ಅಂದ್ರೆ ಭಯ ಇಲ್ಲ ಅಂತ ಆಯ್ತು. ಕಾನೂನು ಮೀರಿದವರಿಗೆ ಶಿಕ್ಷೆ ಏನು ಅಂತ ಅರ್ಥಮಾಡಿಸಬೇಕಿದೆ. ಕಾರ್ಯಾಂಗ, ಶಾಸಕಾಂಗ ನ್ಯಾಯಾಂಗ ,ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡಬೇಕು. ಮೂರು ಅಂಗಗಳ ಕಾರ್ಯನಿರ್ವಹಣೆ ಸಾಲುತ್ತಿಲ್ಲ ಎಂಬುದು ಇಂತಹ ಘಟನೆಯಿಂದ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
