ಉಡುಪಿ : ಹೆಬ್ರಿಯಲ್ಲಿ ಭಾನುವಾರ ಮೇಘಸ್ಫೋಟ ಸಂಭವಿಸಿದ್ದು, ಧಾರಾಕಾರ ಮಳೆ ಸುರಿದು ಹಠಾತ್ ಜಲ ಪ್ರವಾಹ ಉಂಟಾಗಿದೆ. ಈ ಪ್ರವಾಹದಲ್ಲಿ ಹಲವು ವಾಹನಗಳು, ಜಾನುವಾರು ಮತ್ತು ವೃದ್ಧೆಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಭಾನುವಾರ ಮಧ್ಯಾಹ್ನ ಒಂದೇ ಸಮನೆ ಸುರಿದ ಮಳೆಗೆ ಗುಮ್ಮ ಗುಂಡಿ ನದಿ ನೀರು ಉಕ್ಕಿ ಹರಿದಿದ್ದು, ಬಲ್ಲಾಡಿ, ಕಂತಾರ್‌ಬೈಲು ಗ್ರಾಮದ ಜನರು ತತ್ತರಿಸಿ ಹೋಗಿದ್ದಾಾರೆ. ಧಿಡೀರ್ ಸುರಿದ ಮಳೆಗೆ ಗ್ರಾಮದ ಕೆಲವು ಮನೆಗಳು ಜಲಾವೃತಗೊಂಡಿದ್ದು, ಒಂದು ಕಾರು, 15ಕ್ಕೂ ಹೆಚ್ಚು ದನಕರುಗಳು, ಅಡಿಕೆ ಮರಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅಪಾರ ನಷ್ಟ ಉಂಟಾಗಿದೆ.
ಧಿಡೀರ್ ಸುರಿದ ಧಾರಾಕಾರ ಮಳೆಯಿಂದ ತತ್ತರಿಸಿ ಹೋದ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಸ್ಥಳೀಯರು, ಅಧಿಕಾರಿಗಳು ಆಗಮಿಸಿದ್ದರು. ಇನ್ನು ಈ ದಿಢೀರ್ ಮೇಘಸ್ಫೋಟದಿಂದ ಪ್ರವಾಹ ಉಂಟಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.