ಬೆಂಗಳೂರು: ಉತ್ತರ ಪ್ರದೇಶದಲ್ಲಿ ನಮ್ಮ ಕರ್ನಾಟಕ ಪೊಲೀಸರು ತಪ್ಪು ಮಾಡಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಕರ್ನಾಟಕ ಪೊಲೀಸರು ಪೇಚಿಗೆ ಸಿಲುಕಿದ ವಿಚಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಿದೆ. ಆದರೆ ನಮ್ಮ ಪೊಲೀಸರು ತಪ್ಪೇನು ಮಾಡಿಲ್ಲ ಅವರು ಮಫ್ತಿಯಲ್ಲಿ ಪೊಲೀಸ್ ಹೋಗಿದ್ದು, ಅಲ್ಲಿಯ ಪೊಲೀಸ್ ಗೆ ತಿಳಿಸಬೇಕಿತ್ತು. ಆದರೆ ತಿಳಿಸದೇ ಹೋಗಿದ್ದಾರೆ. ಅಲ್ಲಿನ ಪೊಲೀಸ್ ಮೊದಲು ನೋಟಿಸ್ ಕೊಡಿ, ನಂತರ ನೋಡೋಣ ಎಂದು ತಿಳಿಸಿದ್ದಾರೆ.
ಅಜಿತ್ ಭಾರತಿ ಎಂಬ ಯುಟ್ಯೂಬರನ್ನು ಅರೆಸ್ಟ್ ಮಾಡಲು ಹೋಗಿದ್ದರು. ನೋಟಿಸ್ ಕೊಟ್ಟ ಮೇಲೆ ಆ ಯೂಟ್ಯೂಬರ್ ಬಾರದೇ ಹೋದರೆ ವಾರೆಂಟ್ ತೆಗೆದುಕೊಂಡು ಬಂಧಿಸ್ತಾರೆ. ಕೆಲವೊಮ್ಮೆ ಈ ರೀತಿಯ ಗೊಂದಲ ಆಗುತ್ತದೆ. ನಮ್ಮ ಪೊಲೀಸರೇನು ತಪ್ಪು ಮಾಡಿಲ್ಲ ಎಂದು ಅವರು ಸಮರ್ಥನೆ ಮಾಡಿಕೊಂಡರು.
ಇನ್ನು ವಾಲ್ಮಿಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣದ ಬಗ್ಗೆ ಪತ್ರಿಕ್ರಿಯೆ ನೀಡಿದ ಅವರು, ಪ್ರಕರಣದ ತನಿಖೆ ನಡಿಯುತ್ತಿದೆ. ಬ್ಯಾಂಕಿಂಗ್ ತನಿಖೆ ಸಿಬಿಐ ಮಾಡ್ತಿದೆ. ಅಧಿಕೃತವಾಗಿ ಸಿಬಿಐ ನಮ್ಮನ್ನ ಏನೂ ಕೇಳಿಲ್ಲ. ನಮ್ಮ ಎಸ್‌ಐಟಿ ತನಿಖೆಯೂ ನಡಿಯುತ್ತಿದೆ ಎಂದಿದ್ದರು ಎಂದು ಹೇಳಿದರು.