ಉದ್ಯಮಿಯೋರ್ವರ ಪತ್ನಿ ಫಾರ್ಮ್ ಹೌಸ್ ನಲ್ಲಿ ಶವವಾಗಿ ಪತ್ತೆ.!

 

ಬೆಂಗಳೂರು: ಉದ್ಯಮಿಯೋರ್ವರ ಪತ್ನಿ ಫಾರ್ಮ್ ಹೌಸ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪಿಯಲ್ಲಿ ನಡೆದಿದೆ.

ಇಲ್ಲಿನ ಗಿರಿಗೌಡನ ದೊಡ್ಡಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಶಾಂತಿ ಸ್ಟೀಲ್ ಇಂಡಸ್ಟ್ರೀಸ್ ಮಾಲೀಕ ಉದ್ಯಮಿ ಉಗ್ರಪ್ಪ ಅವರ ಪತ್ನಿ ಶಾಂತಮ್ಮ (50) ಕೊಲೆಯಾಗಿರುವ ಮಹಿಳೆ ಎಂದು ತಿಳಿದುಬಂದಿದೆ.

Advertisement

ಉಗ್ರಪ್ಪ ಪತ್ನಿ ಶಾಂತಮ್ಮ ಹೆಸರಲ್ಲಿ ವಿವಿಧ ಉದ್ಯಮ ನಡೆಸುತ್ತಿದ್ದರು. ಆದರೆ ಕೆಲ ವರ್ಷಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತಿ ಅಗಲಿಕೆಯಿಂದ ನೊಂದಿದ್ದ ಶಾಂತಮ್ಮ ಮಗನೊಂದಿಗೆ ವಾಸವಾಗಿದ್ದರು. ಆದರೆ ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದ. ಪತಿ ಹಾಗೂ ಮಗ ಇಬ್ಬರನ್ನೂ ಕಳೆದುಕೊಂಡಿದ್ದ ಶಾಂತವ್ವ ತೀವ್ರವಾಗಿ ನೊಂದಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಇದು ಕೊಲೆ ಎಂಬುದು ತಿಳಿದುಬಂದಿದೆ.! ತನಿಖೆ ಮುಂದುವರೆದಿದೆ.

 

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement