ಪ್ಯಾರಿಸ್: ಒಲಿಂಪಿಕ್ ಚಿನ್ನದ ಪದಕ ವಿಜೇತ ಥಾಮಸ್ ಸೆಕಾನ್ ಪ್ಯಾರಿಸ್‌ನ ಕ್ರೀಡಾ ಗ್ರಾಮದಲ್ಲಿ ಇರುವ ಉದ್ಯಾನದಲ್ಲಿ ಮಲಗಿದ್ದಾರೆ. ಕ್ರೀಡಾ ಗ್ರಾಮದ ವಸತಿ ವ್ಯವಸ್ಥೆ ಉತ್ತಮವಾಗಿಲ್ಲ. ಅಲ್ಲಿನ ಎ.ಸಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಥಾಮಸ್ ಸೆಕಾನ್ ದೂರಿದ್ದಾರೆ. ಇದೇ ರೀತಿ ಇನ್ನೂ ಹಲವಾರು ಕ್ರೀಡಾಪಟುಗಳು ದೂರಿದ್ದಾರೆ. ಕ್ರೀಡಾ ಗ್ರಾಮದಲ್ಲಿ ಉಳಿಯದೇ ಬೇರೆಡೆ ವಸತಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಊಟ ಕೂಡ ತೀರಾ ಕಳಪೆಯಾಗಿದೆ ಎಂದು ಆರೋಪಿಸಿದ್ದಾರೆ.
