ಉದ್ಯೋಗಕ್ಕೆ ಆಯ್ಕೆಯಾಗಲು ರೆಸ್ಯೂಮ್ ನಲ್ಲಿ ಇರಬೇಕಾದ ಮುಖ್ ಅಂಶಗಳು..!

ನಿಮ್ಮ ರೆಸ್ಯೂಮ್​ ಉತ್ತಮವಾಗಿರಬೇಕು ಅಂದ್ರೆ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ.

  •  ನಿಮ್ಮ ರೆಸ್ಯೂಮ್‌ ತಯಾರಿಸುವ ಮುನ್ನ ಇತರರ ರೆಸ್ಯೂಮ್‌ಗಳನ್ನು ಒಮ್ಮೆ ಪರಿಶೀಲಿಸಿ.          ಒಬ್ಬೊಬ್ಬರ ರೆಸ್ಯೂಮ್​​ನಿಂದಲೂ ನೀವು ಒಂದೊಂದು ಐಡಿಯಾ ಪಡೆಯಬಹುದು.
  • ಅನಗತ್ಯ ಅಂಶಗಳನ್ನು ಬರೆಯಬೇಡಿ. ಉದ್ಯೋಗದಾತರು ಸಾಮಾನ್ಯವಾಗಿ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಲು ಸೀಮಿತ ಸಮಯವನ್ನು ಹೊಂದಿರುತ್ತಾರೆ. ಹೀಗಾಗಿ ರೆಸ್ಯೂಮ್ ಸಂಕ್ಷಿಪ್ತವಾಗಿರಲಿ.
  • ನಿಮ್ಮ ರೆಸ್ಯೂಮ್‌ನಲ್ಲಿರುವ ಅಕ್ಷರಗಳು ಸ್ಪಷ್ಟವಾಗಿ ಕಾಣುವಂತಹ ಫಾಂಟ್ ಹಾಗೂ ಫಾಂಟ್​ ಸೈಜ್​ ಬಳಸಿ.
  • ರೆಸ್ಯೂಮ್​ನಲ್ಲಿ ನಿಮ್ಮ ಭಾವಚಿತ್ರ ಹಾಕುವುದಿದ್ದರೆ ಸೆಲ್ಫಿ ಫೋಟೋ ಹಾಕಬೇಡಿ.
  • ಕೆಲಸದ ವಿಚಾರದಲ್ಲಿ ನಿಮ್ಮ ಸಾಧನೆಗಳನ್ನು ಉಲ್ಲೇಖಿಸಲು ಮರೆಯದಿರಿ. ಶಿಕ್ಷಣ ಮುಗಿಸಿ ಮೊದಲ ಬಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಿದ್ದರೆ ವಿದ್ಯಾಭ್ಯಾಸದ ವೇಳೆ ನೀವು ಯಾವುದಾದರೂ ಕೋರ್ಸ್​ ಮಾಡಿ ಅಲ್ಲಿ ಸಾಧನೆ ಮಾಡಿದ್ದರೆ ಅದನ್ನೂ ಸೇರಿಸಬಹುದು.
  • ನಿಮ್ಮ ಶಿಕ್ಷಣ ಅಥವಾ ವಿದ್ಯಾರ್ಹತೆ ಕುರಿತು ನಿಖರ ಡೇಟಾ ಇರಲಿ. ನಿಮ್ಮ ಕೆಲಸದ ಅನುಭವ ಮತ್ತು ಕೌಶಲ್ಯಗಳ ಬಗ್ಗೆ ಸೂಕ್ತವಾದ ಮಾಹಿತಿಯನ್ನು ಸೇರಿಸಿ.
  • ಯಾವುದೇ ಕಾರಣಕ್ಕೂ ಯಾವುದೇ ಸುಳ್ಳು ಮಾಹಿತಿ ಬರೆಯಬೇಡಿ. ಆ ಸಮಯಕ್ಕೆ ನೀವು ಬಚಾವಾದರೂ ಭವಿಷ್ಯದಲ್ಲಿ ಸಿಕ್ಕ ಕೆಲಸವನ್ನೂ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement