ಎಂಥಾ ಕಾಲ ಬಂತು ನೋಡಿ… ಐಫೋನ್ ಖರೀದಿಸಲು 8 ತಿಂಗಳ ಮಗುವನ್ನೇ ಮಾರಾಟ ಮಾಡಿದ ದಂಪತಿ..!

ಪಶ್ಚಿಮ ಬಂಗಾಳ: ಮನೆಯ ಏನಾದರು ಅಗತ್ಯ ವಿಚಾರಕ್ಕೆ ದುಡ್ಡಿನ ಸಮಸ್ಯೆ ತಲೆದೂರಿದರೆ ಬ್ಯಾಂಕ್ ನಿಂದ ಸಾಲ ಪಡೆಯುತ್ತೇವೆ ಅಥವಾ ನಮ್ಮ ಗೆಳೆಯರ ಸಮ್ಮುಖದಲ್ಲಿ ಹಣಕಾಸಿನ ವ್ಯವಹಾರ ನಡೆಸುತ್ತೇವೆ ಆದರೆ ಇಲ್ಲೊಂದು ದಂಪತಿ ಐಫೋನ್ ಖರೀದಿಸಲು ಹೆತ್ತ ಮಗುವನ್ನೇ ಮಾರಾಟ ಮಾಡಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು ಇಲ್ಲಿ ದಂಪತಿಗಳು ತಮ್ಮ ಮಗುವನ್ನು ಐಫೋನ್ ಖರೀದಿಸಲು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಅವರು ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಮಾಡಲು ಐಫೋನ್ ಖರೀದಿಸಲು ಬಯಸಿದ್ದರು ಎನ್ನಲಾಗಿದೆ ಫೋನ್ ಖರೀದಿಸಲು ಆರ್ಥಿಕ ಸಮಸ್ಯೆ ಎದುರಾಗಿದೆ ಹೀಗಾಗಿ ತಮ್ಮ ಮಗುವನ್ನೇ ಮಾರಾಟ ಮಾಡಲು ಮುಂದಾಗಿದ್ದಾರೆ ಅಲ್ಲದೆ ಮಗುವನ್ನು ಮಾರಾಟ ಕೂಡ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಗುವಿನ ತಾಯಿ ಸತಿ ಹಾಗೂ ಮಗುವನ್ನು ಖರೀದಿಸಿದ ಮಹಿಳೆಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು ಮಗುವಿನ ತಂದೆ ಜೈದೇವ್ ಇನ್ನೂ ತಲೆಮರೆಸಿಕೊಂಡಿದ್ದು ಪೊಲೀಸರು ಆತನ ಪತ್ತೆಗೆ ಬಲೆ ಬಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದದ್ದು ಹೀಗೆ : ಸತಿ ಹಾಗೂ ಜೈದೇವ್ ಆರ್ಥಿಕವಾಗಿ ಸದೃಢರಾಗಿರಲಿಲ್ಲ ಅಲಲ್ದೆ ನೆರೆಹೊರೆಯವರಲ್ಲಿ ಆಗಾಗ ಸಾಲದ ರೂಪದಲ್ಲಿ ಹಣ ಪಡೆಯುತ್ತಿದ್ದರು ಎನ್ನಲಾಗಿದೆ ಆದರೆ ಇತ್ತೀಚಿನ ದಿನಗಳಲ್ಲಿ ದಂಪತಿಗಳಲ್ಲಿ ಬಹಳಷ್ಟು ಬದಲಾವಣೆಗಳು ಕಂಡು ಬಂದಿತ್ತು ಜೊತೆಗೆ ದಂಪತಿಗಳಿಗೆ ಎಂಟು ತಿಂಗಳ ಹೆಣ್ಣು ಮಗು ಕೂಡಾ ಮನೆಯಲ್ಲಿ ಕಾಣುತ್ತಿರಲಿಲ್ಲ ಈ ನಡುವೆ ಪೋಷಕರ ಕೈಯಲ್ಲಿ ಐಫೋನ್ ಬಂದಿದ್ದು ನೆರೆಹೊರೆಯವರಲ್ಲಿ ಸಾಕಷ್ಟು ಅನುಮಾನ ಹುಟ್ಟುವಂತೆ ಮಾಡಿತ್ತು. ಇದೆಲ್ಲವನ್ನು ಗಮನಿಸಿದ ನೆರೆಹೊರೆಯ ಮಂದಿ ಈ ಪೋಷಕರಲ್ಲಿ ಮಗುವಿನ ವಿಚಾರ ಕೇಳಿದಾಗ ಮಗುವನ್ನು ಮಾರಾಟ ಮಾಡಿರುವ ವಿಚಾರ ಬಾಯಿ ಬಿಟ್ಟಿದ್ದಾರೆ. ಕೂಡಲೇ ಈ ವಿಚಾರವನ್ನು ನೆರೆಹೊರೆಯವರು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪೋಷಕರ ಮನೆಯತ್ತ ಧಾವಿಸಿದ್ದಾರೆ ಈ ವೇಳೆಗಾಗಲೇ ಮಹಿಳೆಯ ಪತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ಮಗುವನ್ನು ಖರೀದಿಸಿದ ವ್ಯಕ್ತಿಗಳಿಂದ ಮಗುವನ್ನು ರಕ್ಷಣೆ ಮಾಡಿ ಅವರ ವಿರುದ್ಧ ದೂರು ದಾಖಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪಶ್ಚಿಮ ಬಂಗಾಳದ ವಿವಿಧ ಸ್ಥಳಗಳಿಗೆ ಹೋಗಿ ಇನ್‌ಸ್ಟಾಗ್ರಾಮ್ ರೀಲ್ ಮಾಡಲು ಮೊಬೈಲ್ ತೆಗೆದುಕೊಳ್ಳಲು ಹಣದ ಅವಶ್ಯಕತೆ ಇದ್ದುದರಿಂದ ಮಗುವನ್ನು ಮಾರಾಟ ಮಾಡಿದ್ದೇವು ಎಂದು ತಪ್ಪು ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ತಲೆಮರೆಸಿಕೊಂಡಿರುವ ಮಹಿಳೆಯ ಪತಿಯ ಬಂಧನಕ್ಕೆ ಬಲೆ ಬಿಸಿದ್ದಾರೆ. ಜನ ತಮ್ಮ ಆಡಂಬರದ ಜೀವನಕ್ಕಾಗಿ ಯಾವ ಮಟ್ಟಕ್ಕೆ ಇಳುಯುತ್ತಾರೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಪ್ರಕರಣ ಬೇಕಾಗಿಲ್ಲ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement