ಬೆಂಗಳೂರು: ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸುವುದಾಗಿ ಇಂಡಿಯಾ ಟೀಂ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ ಮ್ಯಾನೇಜರ್‌ಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ತಿರುಪತಿಯಲ್ಲಿ ಎಷ್ಟೇ ಗದ್ದಲವಿದ್ದರೂ ನಿಮ್ಮನ್ನು ಮುಂದೆ ಕರೆದುಕೊಂಡು ಹೋಗಿ ಸ್ಪೆಷಲ್ ದರ್ಶನ ಮಾಡಿಸಲಾಗುತ್ತದೆ ಎಂದು ವ್ಯಕ್ತಿಯೋರ್ವ ಎಂ.ಎಸ್ ಧೋನಿ ಮ್ಯಾನೇಜರ್‌ಗೆ ಹೇಳಿ ಲಕ್ಷ ಲಕ್ಷ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಘಟನೆ ಇದಾಗಿದ್ದು, ಧೋನಿ ಮ್ಯಾನೇಜರ್ ಸ್ವಾಮಿನಾಥನ್ ತಡವಾಗಿ ದೂರು ನೀಡಿದ್ದಾರೆ. ಸ್ವಾಮಿನಾಥನ್ ಅವರಿಗೆ ತಿಮ್ಮಪ್ಪನ ಹೆಸರಿನಲ್ಲಿ ಬರೋಬ್ಬರಿ ಆರೂವರೆ ಲಕ್ಷ ವಂಚಿಸಿಲಾಗಿದೆಯಂತೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪಿಎ ಅಂತೇಳಿ ಹೆಸರು ಬಳಸಿ ನಾನು ಐಎಎಸ್ ಅಧಿಕಾರಿಯಾಗಿದ್ದು, ಕೇಂದ್ರ ಹಣಕಾಸು ಸಚಿವರ ಬಳಿ ಪಿಎಯಾಗು ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಹನ್ನೆರಡು ಮಂದಿಗೆ ವಿಶೇಷ ದರ್ಶನ ರೂಮ್ ವ್ಯವಸ್ಥೆ ಮಾಡಿಸುವುದಾಗಿ ನಂಬಿಸಿ ಸ್ವಾಮಿನಾಥನ್ ಅವರ ಭೇಟಿ ಮಾಡಿದ್ದ. ಬಳಿಕ ಪ್ರೋಟೋಕಾಲ್ ಮೂಲಕ ಯಾರನ್ನಾದ್ರು ಕಳಿಸಬಹುದು ಎಂದು ಮಾತನಾಡಿ ಆ ಬಳಿಕ ಸ್ನೇಹಿತನನ್ನು ಕಳಿಸೋ ನಿಟ್ಟಿನಲ್ಲಿ ಸ್ವಾಮಿನಾಥನ್ ಮೂರು ಲಕ್ಷ ಹಣವನ್ನು ಪೋನ್ ಪೇ ಮಾಡಿದ್ದರಂತೆ ಹಾಗೂ ಇನ್ನೊಮ್ಮೆ ಮೂರುವರೆ ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಸ್ವಾಮಿನಾಥನ್ ಹೆಚ್ ಎಸ್ ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.