ವಿಷದ ಗಿಡವೆಂದರೂ ಸರಿಯಾದ ರೀತಿಯಲ್ಲಿ ಬಳಸಿದರೆ ಹಲವು ಆರೋಗ್ಯ ಸುಧಾರಿಸುವ ಗುಣಗಳನ್ನು ಹೊಂದಿರುವ ಎಕ್ಕದ ಗಿಡದ ಪ್ರಯೊಜನದ ಬಗ್ಗೆ ಇಲ್ಲಿದೆ ಮಾಹಿತಿ. ಕೇವಲ ದೇವರ ಪೂಜೆಗೆ ಎಂದುಕೊಂಡಿದ್ದ ಎಷ್ಟೋ ಗಿಡಗಳು ಆರೋಗ್ಯ ವೃದ್ಧಿಸುವ ಗುಣಗಳನ್ನು ಹೊಂದಿರುತ್ತವೆ. ಅನಾರೋಗ್ಯವನ್ನು ಹೋಗಲಾಡಿಸಲು ಸುಲಭ ಮನೆಮದ್ದಾಗಿ ಸಿಗುತ್ತವೆ. ಅಂತಹವುಗಳಲ್ಲಿ ಎಕ್ಕದ ಗಿಡ ಕೂಡ ಒಂದು. ಇದರಲ್ಲಿ ಎರಡು ವಿಧಗಳಿವೆ. ಒಂದು ಬಿಳಿ ಎಕ್ಕದ ಗಿಡ, ಇನ್ನೊಂದು ನೀಲಿ ಬಣ್ಣದ ಎಕ್ಕದ ಗಿಡ. ಬಿಳಿ ಎಕ್ಕ ಆರೋಗ್ಯ ಗುಣಗಳನ್ನು ಹೊಂದಿದೆ. ಶಿವನಿಗೆ ಅತ್ಯಂತ ಪ್ರಿಯವಾದ ಹೂವುಗಳಲ್ಲಿ ಈ ಎಕ್ಕದ ಹೂವು ಕೂಡ ಒಂದು. ಶಿವರಾತ್ರಿಯಂದು ಈ ಎಕ್ಕದ ಹೂವಿಗೆ ವಿಶೇಷ ಬೇಡಿಕೆ ಇರುತ್ತದೆ. ಅದೇ ರೀತಿ ಆರೋಗ್ಯದ ವಿಷಯಕ್ಕೆ ಬಂದಾಗ ಎಕ್ಕದ ಗಿಡ ಶ್ರೀಮಂತವಾಗಿದೆ. ಮುಳ್ಳು ತಾಗಿದರೆ, ಚೇಳು ಅಥವಾ ಇನ್ನಿತರ ವಿಷಜಂತುಗಳು ಕಡಿದಾಗ ಈ ಎಕ್ಕದ ಗಿಡದ ಹಾಲನ್ನು ಹಚ್ಚುತ್ತಾರೆ. ಅದರೆ ಮಹತ್ವದ ಸಂಗತಿಯೆಂದರೆ ಎಕ್ಕದ ಗಿಡದ ಹಾಲು ಕಣ್ಣಿಗೆ ಸಿಡಿಯಬಾರದು. ಸಿಡಿದರೆ ಕಣ್ಣು ಕುರುಡಾಗುವ ಅಪಾಯವಿರುತ್ತದೆ. ಹೀಗಾಗಿ ಬಳಕೆಯ ವೇಳೆ ಜಾಗೃತರಾಗಿರಿ. ಚಿಕ್ಕಮಕ್ಕಳ ಕೈಗಂತೂ ಸಿಗದಿದ್ದರೇನೆ ಒಳಿತು. ಎಕ್ಕದ ಗಿಡದಿಂದ ಎಷ್ಟು ಆರೋಗ್ಯಕ್ಕೆ ಒಳ್ಳೆಯ ಗುಣವಿದೆಯೋ ಅಷ್ಟೇ ಅಪಾಯ ಕೂಡ ಇದೆ ಎನ್ನಬಹುದು. ಹಾಗಾದರೆ ಎಕ್ಕದ ಗಿಡ ಯಾವೆಲ್ಲಾ ರೀತಿಯ ಆರೋಗ್ಯ ಸಮಸ್ಯಗಳಿಗೆ ಪರಿಹಾರ ನೀಡಬಲ್ಲದು ಎನ್ನುವುದನ್ನು ತಿಳಿದುಕೊಳ್ಳಿ.ಮಂಡಿ ನೋವಿಗೂ ಪರಿಹಾರ ವಯಸ್ಸಾದಂತೆ ಕಾಲಿನ ಸ್ನಾಯುಗಳಲ್ಲಿ ಶಕ್ತಿ ಕೊರತೆಯಾಗುತ್ತದೆ. ಇದರಿಂದ ಕುಳಿತರೂ, ನಿಂತರೂ ನೋವು ಕಾಡಲಾರಂಭಿಸುತ್ತದೆ. ಇದಕ್ಕೆ ಎಕ್ಕದ ಎಲೆ ಪರಿಹಾರ ನೀಡುತ್ತದೆ. ಮಂಡಿನೋವು ಇರುವವರು ಎಕ್ಕದ ಎಲೆಯನ್ನು ಸುಟ್ಟು ಬಿಸಿ ಇರುವಾಗಲೇ ಅದನ್ನು ನೋವಿರುವ ಜಾಗದಲ್ಲಿ ಇರಿಸಿಕೊಂಡು ಬಟ್ಟೆಯನ್ನು ಕಟ್ಟಿಕೊಂಡರೆ ನೋವು ಕಡಿಮೆಯಾಗುತ್ತದೆ. ದಿನದಲ್ಲಿ ಒಂದು ಅಥವಾ ಎರಡು ಬಾರಿ ಈ ರಿತಿ ಮಾಡಿದರೆ ಉತ್ತ ಫಲಿತಾಂಶ ಕಂಡುಕೊಳ್ಳಬಹುದಾಗಿದೆ.ಅಸ್ತಮಾಕ್ಕೂ ಇದು ಮದ್ದು : ಎಕ್ಕದ ಗಿಡ ವಿಷವಾದರೂ ಸರಿಯಾಗಿ ಬಳಕೆ ಮಾಡಿದರೆ ಆರೋಗ್ಯಕ್ಕೆ ಒಳಿತಾಗುವ ಹಲವು ಗುಣಗಳನ್ನು ಒಳಗೊಂಡಿದೆ. ಎಕ್ಕದ ಗಿಡದ ಹೂವನ್ನು ಒಣಗಿಸಿ ಪುಡಿ ಮಾಡಿ ಚೂರ್ಣದಂತೆ ಮಾಡಿಟ್ಟುಕೊಂಡರೆ ಅಸ್ತಮಾ ರೋಗಿಗಳಿಗೆ ಉತ್ತಮ ಔಷಧವಾಗಿದೆ. ಪ್ರತಿದಿನ ಈ ಚೂರ್ಣದ ಸೇವನೆಯನ್ನು ಮಾಡುತ್ತಿದ್ದರೆ ಅಸ್ತಮಾ, ದುರ್ಬಲತೆ, ಶ್ವಾಸಕೋಶದ ಸಮಸ್ಯೆಗಳು ದೂರವಾಗುತ್ತದೆ. ದಮ್ಮು ರೋಗವಿರುವವರು ಕೂಡ ಈ ಚೂರ್ಣವನ್ನು ಸೇವನೆ ಮಾಡುವುದರಿಂದ ಶ್ವಾಸಕೋಶದಲ್ಲಿ ಹಿಡಿತವಾಗುವ ಅನುಭವ ಸರಿಹೋಗುತ್ತದೆ.ಶರೀರದ ಊತ ನಿವಾರಣೆಗೆ ಸಹಕಾರಿ : ಪ್ರಾಚೀನ ಕಾಲದಿಂದಲೂ ಎಕ್ಕದ ಗಿಡವನ್ನು ಔಷಧೀಯ ಗಿಡವಾಗಿ ಬಳಸುತ್ತಿದ್ದಾರೆ. ಕಾಲು ಅಥವಾ ಇತರ ದೇಹದ ಮೇಲಾಗುವ ಊತವನ್ನು ಕಡಿಮೆ ಮಾಡಲು ಎಕ್ಕದ ಎಲೆ ಸಹಕಾರಿಯಾಗಿದೆ. ಎಕ್ಕದ ಎಲೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಬಿಸಿ ಮಾಡಿ ಊತವಿರುವ ಜಾಗದಲ್ಲಿ ಇಡಬೇಕು. ಒಂದು ವಾರಗಳ ಕಾಲ ಹೀಗೆ ಮಾಡುವುದಿರಿಂದ ಕಾಲಿನ ಊತ ಕಡಿಮೆಯಾಗುತ್ತದೆ. ಶರೀರದ ಮೇಲೆ ಗಾಯಗಳಾದರೆ ಎಕ್ಕದ ಎಲೆಗಳನ್ನು ಬಿಸಿ ಮಾಡಿ ಗಾಯದ ಮೇಲೆ ಇಡುವುದರಿಂದ ರಕ್ತಸ್ರಾವ ನಿಲ್ಲುತ್ತದೆ ಜೊತೆಗೆ ನೋವು ಕೂಡ ಬೇಗನೆ ವಾಸಿಯಾಗುತ್ತದೆ.ಮಧುಮೇಹ ನಿಯಂತ್ರಣಕ್ಕೂ ಸಹಕಾರಿ : ಇತ್ತೀಚೆಗಂತೂ ಮಧುಮೇಹ ಎಲ್ಲರಲ್ಲೂ ಇರುವ ಸಾಮಾನ್ಯ ಕಾಯಿಲೆಯಂತಾಗಿದೆ. ಮಧುಮೇಹಕ್ಕೆ ಸಾಕಷ್ಟು ಔಷಧಗಳಿದ್ದರೂ ಮೂಲಿಕೆಗಳ ಔಷಧ ಹೆಚ್ಚು ಪರಿಣಾಮಕಾರಿಯಾಗಿದೆ. ಮಧುಮೇಹ ನಿಯಂತ್ರಣಕ್ಕೆ ಎಕ್ಕದ ಎಲೆ ಸಹಕಾರಿಯಾಗಿದೆ. ಹೌದು, ಎಕ್ಕದ ಎಲೆಗಳನ್ನು ಬಿಸಿ ಮಾಡಿ ರಾತ್ರಿ ಮಲಗುವ ಮುನ್ನ ಪಾದದ ಕೆಳಗೆ ಇಟ್ಟು ಬಟ್ಟೆ ಸುತ್ತಿಕೊಂಡು ಮಲಗಿ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಂದು ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಆದರೂ ಎಕ್ಕದ ಗಿಡವನ್ನು ಬಳಸುವ ಮುನ್ನ ವೈದ್ಯರಲ್ಲಿ ಆಥವಾ ಆಯುರ್ವೇದ ಪಂಡಿತರಲ್ಲಿ ಸಲಹೆ ಪಡೆಯುವುದು ಒಳ್ಳೆಯದು.
ಎಕ್ಕದ ಗಿಡದಲ್ಲಿದೆ ಲೆಕ್ಕಿಸದಷ್ಟು ಆರೋಗ್ಯ ಗುಣ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
For Feedback - [email protected]
Join Our WhatsApp Channel
Related News
ನ. 26ರಿಂದ ಡಿ.8ರವರೆಗೆ ಅಗ್ನಿವೀರ್ ನೇಮಕಾತಿ ರ್ಯಾಲಿ
25 November 2024
ಖ್ಯಾತ ಕಂಸಾಳೆ ಕಲಾವಿದ ಕುಮಾರಸ್ವಾಮಿ ವಿಧಿವಶ.!
25 November 2024
ನಾಳೆ ನ.26ರಂದು ಈ ಹಳ್ಳಿಗಳಲ್ಲಿ ವಿದ್ಯುತ್ ಇರಲ್ಲ
25 November 2024
ಮುರಾರ್ಜಿ ದೇಸಾಯಿ ವಸತಿ ಶಾಲೆ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ.!
25 November 2024
ನಾಳೆ 26 ರಂದು ಈ ವಾರ್ಡ್ ಗಳಲ್ಲಿ ವಿದ್ಯುತ್ ಇರಲ್ಲ.!
25 November 2024
ಚದುರಂಗ ಸ್ಪರ್ಧೆ ದೇಹದ ಶಕ್ತಿ, ಕೌಶಲ್ಯ ಅವಲಂಬಿಸಿರುವುದಿಲ್ಲ:ಪ್ರೊ ಕೃಷ್ಣೆಗೌಡ
25 November 2024
ನನ್ನ ಈ ಎತ್ತರಕ್ಕೆ ಕಬೀರಾನಂದ ಶ್ರೀಗಳು ಕಾರುಣ್ಯ: ಡಾ.ಕಮಲಮ್ಮ.!
25 November 2024
LATEST Post
ಪ್ರಿಯತಮನ ಸುಳಿವು ಬಿಟ್ಟುಕೊಟ್ಟ: ರಶ್ಮಿಕಾ ಮಂದಣ್ಣ
25 November 2024
18:15
ಪ್ರಿಯತಮನ ಸುಳಿವು ಬಿಟ್ಟುಕೊಟ್ಟ: ರಶ್ಮಿಕಾ ಮಂದಣ್ಣ
25 November 2024
18:15
ನ. 26ರಿಂದ ಡಿ.8ರವರೆಗೆ ಅಗ್ನಿವೀರ್ ನೇಮಕಾತಿ ರ್ಯಾಲಿ
25 November 2024
18:13
ಖ್ಯಾತ ಕಂಸಾಳೆ ಕಲಾವಿದ ಕುಮಾರಸ್ವಾಮಿ ವಿಧಿವಶ.!
25 November 2024
17:51
‘ಕಾಂಗ್ರೆಸ್ ಪಕ್ಷದ ಪಕಳೆಗಳು ದೇಶಾದ್ಯಂತ ಒಂದೊಂದೇ ಉದುರುತ್ತಿವೆ’- ಜೆಡಿಎಸ್ ವಾಗ್ದಾಳಿ
25 November 2024
17:38
ನಾಳೆ ನ.26ರಂದು ಈ ಹಳ್ಳಿಗಳಲ್ಲಿ ವಿದ್ಯುತ್ ಇರಲ್ಲ
25 November 2024
17:38
ಶ್ರೀ ಯೋಗಿ ರಾಜ ಗುರು ಮಂಗಲ ನಾಥ್ ಜಿ ಅವರಿಂದ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಮತ್ತು ಹೋಮ.!
25 November 2024
17:35
ಮುರಾರ್ಜಿ ದೇಸಾಯಿ ವಸತಿ ಶಾಲೆ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ.!
25 November 2024
17:29
ನಾಳೆ 26 ರಂದು ಈ ವಾರ್ಡ್ ಗಳಲ್ಲಿ ವಿದ್ಯುತ್ ಇರಲ್ಲ.!
25 November 2024
17:25
ಚದುರಂಗ ಸ್ಪರ್ಧೆ ದೇಹದ ಶಕ್ತಿ, ಕೌಶಲ್ಯ ಅವಲಂಬಿಸಿರುವುದಿಲ್ಲ:ಪ್ರೊ ಕೃಷ್ಣೆಗೌಡ
25 November 2024
17:21
ನನ್ನ ಈ ಎತ್ತರಕ್ಕೆ ಕಬೀರಾನಂದ ಶ್ರೀಗಳು ಕಾರುಣ್ಯ: ಡಾ.ಕಮಲಮ್ಮ.!
25 November 2024
17:18
ಬರೀ ಅಂಕಗಳಿಗೆ ಮಾತ್ರವೇ ಮಾನ್ಯತೆಗಿಂದ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು: ಉಪ ಕುಲಪತಿ ಕುಂಬಾರ್
25 November 2024
17:14
ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿಜಯ್.!
25 November 2024
17:09
RCB ತಂಡ ಸೇರಿದ ಕೃನಾಲ್ ಪಾಂಡ್ಯ
25 November 2024
16:45
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆಯಿಂದ ಲಕ್ಷದೀಪೋತ್ಸವ ಸಂಭ್ರಮ..!
25 November 2024
15:32
ಕೊಪ್ಪಳದಲ್ಲಿ ಅಪರೂಪದ ಉರಿ ಉಯ್ಯಾಲಿನ ಶಾಸನ ಶಿಲ್ಪಗಳು ಪತ್ತೆ
25 November 2024
15:14
ಮೀನುಗಾರಿಕಾ ದೋಣಿಯಲ್ಲಿ ಸಾಗಿಸ್ತಿದ್ದ 5 ಟನ್ ಮಾದಕ ವಸ್ತು ಕೋಸ್ಟ್ ಗಾರ್ಡ್ ವಶ
25 November 2024
15:13
ರಾಜಕಾರಣಿಗಳಿಗೆ ಕಾನೂನಿನ ಭಯ ಇಲ್ಲದಂತೆ ಮಾಡಿದ್ದು Ex-CJI ಚಂದ್ರಚೂಡ್ : ರಾವತ್ ಕಿಡಿ
25 November 2024
13:54
ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು
25 November 2024
13:48
‘ಸಾರ್ವಜನಿಕ ತಿರಸ್ಕೃತರಿಂದ ಗೂಂಡಾಗಿರಿ ಮೂಲಕ ಸಂಸತ್ತು ನಿಯಂತ್ರಿಸುವ ಪ್ರಯತ್ನ’ – ಪ್ರಧಾನಿ ಮೋದಿ
25 November 2024
13:46
“Google Map” ಬಳಸಿ ಕಾರು ಚಾಲನೆ : ಅಪೂರ್ಣ ಸೇತುವೆಯಿಂದ ಕಾರು ಕೆಳಕ್ಕೆ ಬಿದ್ದು ಮೂವರು ಮೃತ್ಯು..!
25 November 2024
12:41
ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ರಾಜೀನಾಮೆ
25 November 2024
12:40
29 ಲಕ್ಷ ಕೋಟಿ ಆಸ್ತಿ ಗಳಿಸಿ ಇತಿಹಾಸ ಸೃಷ್ಟಿಸಿದ ಎಲಾನ್ ಮಸ್ಕ್..!
25 November 2024
12:38
ಹೊಸ ವ್ಯಾಪಾರ ಆರಂಭಿಸಿದ ಡೊನಾಲ್ಡ್ ಟ್ರಂಪ್
25 November 2024
12:00
‘ಇನ್ನೂ ಯಾವುದೂ ಅಧಿಕೃತವಲ್ಲ’- ಪೋಸ್ಟ್ ಹಂಚಿಕೊಂಡ ರೆಹಮಾನ್ ಪತ್ನಿ ಸಾಯಿರಾ
25 November 2024
11:19
‘ಕೋಟಿ ಭಕ್ತರ ಬೇಡಿಕೆ ಚಾಂಮುಂಡೇಶ್ವರಿ ತಾಯಿಗೆ ಚಿನ್ನದ ರಥ ನಿರ್ಮಾಣ’ – ಸಿಎಂ ಸಿದ್ದರಾಮಯ್ಯ ಆದೇಶ
25 November 2024
11:13
ಪ್ರೇಮ ಸಂಬಂಧ ಬ್ರೇಕ್ ಆದ್ರೆ ಪುರುಷನ ಮೇಲೆ ರೇಪ್ ಕೇಸ್ ಹಾಕುವಂತಿಲ್ಲ : ಸುಪ್ರೀಂ ಕೋರ್ಟ್ ತೀರ್ಪು
25 November 2024
10:48
ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ಡಿಸೆಂಬರ್ನಲ್ಲಿ ಗಡುವು- ಅದಾದ ಬಳಿಕ ಮುಂದೆ ಹೇಗೆ? ಇಲ್ಲಿದೆ ವಿವರ
25 November 2024
10:02
ದರ್ಶನ್ ಜಾಮೀನು ರದ್ದು ಪಡಿಸಲು ಕೋರ್ಟ್ಗೆ ಮನವಿ : ಡಾ.ಜಿ.ಪರಮೇಶ್ವರ್
25 November 2024
09:58
ಇಂದಿನಿಂದ ಬಿಪಿಎಲ್ ಕಾರ್ಡ್ ಪರಿಶೀಲನೆ, ಅನರ್ಹರ ಕಾರ್ಡ್ಗಳಿಗೆ ಕತ್ತರಿ: ಪ್ರಕ್ರಿಯೆ ಹೇಗೆಂಬ ವಿವರ ಇಲ್ಲಿದೆ
25 November 2024
09:02
4ನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ನೇಹಾ ಬಯದ್ವಾಲ್
25 November 2024
09:01
ಖಾಲಿ ಹೊಟ್ಟೆಗೆ ಚಹಾ ಸೇವಿಸುವುದರಿಂದಾಗುವ ಪರಿಣಾಮಗಳು.!
25 November 2024
08:59