ಚಿತ್ರದುರ್ಗ : ಜಾಗತಿಕ ಲಿಂಗಾಯತ ಮಹಾಸಭಾದವತಿಯಿಂದ ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶವು ಜ. ೨೭ ಮತ್ತು ೨೮ ರಂದು ಬೆಳಗಾವಿಯ ಶಿವಬಸವ ನಗರದ ಆರ್.ಎನ್.ಶೆಟ್ಟಿ ಪಾಲಿಟ್ನೆಕಿಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಚಿತ್ರದುರ್ಗ ಘಟಕದ ಅಧ್ಯಕ್ಷರಾದ ಡಿ.ಕೆಂಚವೀರಪ್ಪ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಡಾ. ಬ. ಡಾ. ಫ. ಗು. ಹಳಕಟ್ಟಿ ಅವರಂತಹ ಅನೇಕ ವಿದ್ವಾಂಸರ ಪರಿಶ್ರಮದ ಫಲವಾಗಿ ಇಂದು ಶರಣರ ೨೩೦೦೦ ವಚನಗಳು ಪ್ರಕಟಗೊಂಡಿವೆ. ಲಿಂಗಾಯತ ಧರ್ಮದ ಇತಿಹಾಸ, ತತ್ತ್ವ, ಧರ್ಮ, ಸಾಹಿತ್ಯ, ಸಂಸ್ಕೃತಿಯಂತಹ ಮಹತ್ವದ ವಿಷಯಗಳು ವಚನಗಳ ಮೂಲಕ ನಮ್ಮರಿವಿಗೆ ಬಂದ ಕಾರಣವಾಗಿ ನಮ್ಮ ಧರ್ಮ-ಲಿಂಗಾಯತ, ಧರ್ಮಗುರು ಬಸವಣ್ಣನವರು, ಸಂವಿಧಾನ ವಚನ ಸಾಹಿತ್ಯ ಎಂಬುದು ಸ್ಪಷ್ಟವಾಯಿತು. ಇಂದು ಈ ವಿಷಯವನ್ನು ಇನ್ನಷ್ಟು ವ್ಯಾಪಕವಾಗಿ ಪ್ರಸಾರಮಾಡುವ ಕಾರ್ಯದಲ್ಲಿ ಮಹಿಳೆಯರ ಸಹಭಾಗಿತ್ವವೂ ಅತ್ಯವಶ್ಯವಾಗಿದೆ. ಮುಂಬರುವ ಜನಗಣತಿ ಹಾಗು ಜಾತಿಗಣತಿಯ ಸಂದರ್ಭಗಳಲ್ಲಿ ಲಿಂಗಾಯತ ಧರ್ಮ ಮತ್ತು ಸಮಾಜ ತನ್ನ ಅಸ್ತಿತ್ವ ಹಾಗು. ಆಸ್ಥಿತೆಯನ್ನು ಕಾಯ್ದುಕೊಳ್ಳುವಂತಾಗಲು ಲಿಂಗಾಯತ ಧರ್ಮೀಯರಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಈ ಸಮಾವೇಶದ ಮೂಲಕ ಅರಿವನ್ನು ಮೂಡಿಸಬೇಕಾಗಿದೆ ಎಂದರು.
ನಮ್ಮ ರಾಜಕಾರಣಿಗಳು ಹಾಗು ಪಟ್ಟಭದ್ರ ಹಿತಾಸಕ್ತಿಗಳು ಹಲವಾರು ಆಮಿಷಗಳ ಮೂಲಕ ಲಿಂಗಾಯತರ ಸಮಗ್ರತೆಗೆ ಹಾಗು ಐಕ್ಯತೆಯನ್ನು ಹಾಳು ಮಾಡದಂತೆ ಈ ಸಮಾವೇಶದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದು ಲಿಂಗಾಯತ ಸ್ವತಂತ್ರ ೩ ದರ್ಮದ ಹೋರಾಟ ಹಾಗು ಮೀಸಲಾತಿಯ ಹೋರಾಟಗಳು ಪರಸ್ಪರ ಪೂರಕವಾಗಿದ್ದು, ಸ್ವತಂತ್ರ ಧರ್ಮದ ಮಾನ್ಯತೆ ಹಾಗು ಮೀಸಲಾತಿಗಳು ಲಿಂಗಾಯತರ ಹಕ್ಕುಗಳಾಗಿವೆ. ಇಂದು ಬೌದ್ಧ, ಜೈನ, ಸಿಬ್ಬ ಧರ್ಮಗಳು ಮಾತ್ರ ಧರ್ಮ ಮಾನ್ಯಗಿವೆ. ಆ ಧರ್ಮದವರೆಲ್ಲರೂ ಮೀಸಲಾತಿಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.
ಸಂವಿಧಾನಾತ್ಮಕವಾಗಿ ಸ್ವತಂತ್ರ ಧರ್ಮವಾಗಿ ಪರಿಗಣಿತವಾಗುವ ಎಲ್ಲ ಲಕ್ಷಣಗಳನ್ನು ಲಿಂಗಾಯತ ಧರ್ಮ ಹೊಂದಿದ್ದರೂ ಹಿಂದುತ್ವದ ಭಾಗ ಎಂದೇ ಮುಂದುವರಿಯುತ್ತಾ ಬಂತು. ಇದರಿಂದ ಎಚ್ಚೆತ್ತುಗೊಂಡ ಸಮುದಾಯದ ಜನ ಲಿಂಗಾಯತ ಒಂದು ಸ್ವತಂತ್ರ ಧರ್ಮ ಮತ್ತು ವೀರಶೈವ ಅದರ ಉಪ ಪಂಗಡ ಎಂದು ತೆರೆಗೆ ಸರಿದ ಇದರ ದಾಖಲೆಗಳನ್ನು ಎತ್ತಿ ಹಿಡಿದು ಶತಮಾನಗಳಿಂದ ಧ್ವನಿ ಎತ್ತುತ್ತ ಬಂದರು. ಇದು ಕಳೆದ ಆರೇಳು ವರ್ಷಗಳಿಂದ ಹೆಚ್ಚು ಸಂಘಟಿತಗೊಂಡು ಈ ಹಕ್ಕೊತ್ತಾಯಕ್ಕಾಗಿಯೇ ಜಾಗತಿಕ ಲಿಂಗಾಯತ ಮಹಾಸಭಾ” ಸಂಘಟನೆ ಸ್ಥಾಪಿತವಾಯಿತು. ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು ಘೋಷಿಸಲು ಈ ಹಿಂದೆ ರಾಜ್ಯ ಸರ್ಕಾರದ ಮೂಲಕ ಶಿಫಾರಸ್ಸುಗೊಂಡು ಭಾರತ ಸರ್ಕಾರಕ್ಕೆ ಕಳುಹಿಸಿದ ಪ್ರಸ್ತಾವನೆ ಅಸ್ಪಷ್ಟ ಹಿಂಬರಹದಿಂದ ಹಿಂದಕ್ಕೆ ಬಂದಿದೆ. ಈ ಕುರಿತು ಮುಂದಿನ ಕ್ರಮ ಜರುಗಿಸಲು ಜಾಗತಿಕ ಲಿಂಗಾಯತ ಮಹಾಸಭಾ ಹಲವು ಕಡೆ ಸಮ್ಮೇಳನಗಳನ್ನು ಮಾಡುತ್ತಾ ಬಂದಿದೆ. ಬೆಳಗಾವಿಯಲ್ಲಿ ಎರಡು ದಿನಗಳ ರಾಷ್ಟ್ರ ಮಟ್ಟದ ಮಹಿಳಾ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಜಿಲ್ಲೆಯಲ್ಲಿ ಸುಮಾರು ನಾಲ್ಕು ನೂರು ನೂರು ಸದಸ್ಯರಿದ್ದ ಅದರಲ್ಲಿ ಒಂದು ನೂರು ಮಹಿಳಾ ಸದಸ್ಯರಿದ್ದಾರೆ ಎಂದರು.
ಗೋಷ್ಟಿಯಲ್ಲಿ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಶೈಲಜಾ ಬಾಬು ಕಾರ್ಯದರ್ಶಿ ಶ್ರೀಮತಿ ಜಯಶೀಲ ವೀರಣ್ಣ,ಸಹಾ ಸಂಚಾಲಕರಾದ ಜಿ.ಟೆ ನಂದೀಶ್ ಜಿಲ್ಲಾ ಕಾರ್ಯದರ್ಶಿ ಬಸವರಾಜ ಉಪಸ್ಥಿತರಿದ್ದರು.