ಚಿತ್ರದುರ್ಗ: ದೇಶದ ಎರಡು ರಾಷ್ಟ್ರೀಯ ಪಕ್ಷಗಳು ಚಿತ್ರದುರ್ಗ, ಕೋಲಾರ ಸೇರಿದಂತೆ ರಾಜ್ಯದ ೫ ಲೋಕಸಭಾ ಕ್ಷೇತ್ರಗಳಲ್ಲಿ ಭೋವಿ ಸಮುದಾಯದ ವ್ಯಕ್ತಿಗಳಿಗೆ ಟಿಕೇಟ್ ನೀಡದಿರುವ ಬೆನ್ನಲ್ಲೇ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷಗಳ ವಿರುದ್ದ ಸಿಡಿದಿದ್ದು, ನಮ್ಮ ವ್ಯಕ್ತಿಗಳಿಗೆ ಟಿಕೇಟ್ ನೀಡಬೇಕು ಇಲ್ಲವಾದರೆ ಸಮುದಾಯದ ಮುಂದಿನ ನಡೆ ಎರಡು ಪಕ್ಷಗಳಿಗೆ ವ್ಯತೀರಿಕ್ತವಾಗಿರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಜಾತ್ಯಾತೀತ ದೇಶ. ಭಾರತೀಯರಿಗೆ ಸಂವಿಧಾನವೇ ಮೂಲ ಗ್ರಂಥವಾಗಿದೆ. ಇಲ್ಲಿನ ಪ್ರಜೆ ಸಾಮಾಜಿಕ, ಶೈಕ್ಷಣಿಕ ಧಾರ್ಮಿಕ ಹಾಗೂ ಆರ್ಥಿಕವಾಗಿ ಸಬಲರಾದಾಗ ಮಾತ್ರ ಸಂವಿಧಾನಕ್ಕೆ ಗೌರವ ಕೊಟ್ಟಂತಾಗಲಿದೆ. ಸಂವಿಧಾನದ ಮೂಲ ಸಮಪಾಲು ಸಮಬಾಳು ಎಂಬ ನಿಟ್ಟಿನಲ್ಲಿ ಸಂವಿದಾನ ಆಶಯಗಳನ್ನು ಸಂಪೂರ್ಣವಾಗಿ ಜಾರಿಗೆ ತರುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡಬೇಕಿದೆ. ಭೋವಿ ಸಮಾದಾಯದ ಸುಮಾರು ೧೦-೧೫ ಕೋಟಿ ಜನರು ದೇಶದಲ್ಲಿ ಇದ್ದರು ಕೂಡ ಸಂಸತ್ ಭವನ ಪ್ರವೇಶಕ್ಕೆ ಅನುಕೂಲ ಮಾಡಿಕೊಡದೇ ಇರುವುದು. ರಾಜಕೀಯ ತುಳಿತ ಮಾಡಲಾಗುತ್ತಿದೆ ಎಂಬುದು ತಿಳಿಯುತ್ತದೆ ಎಂದು ಹೇಳಿದ ಅವರು, ಬೋವಿ, ಬಂಜಾರ, ಕೊರುಮ, ಕೊರಚ ಸಮುದಾಯಗಳನ್ನು ನಿರ್ಲಕ್ಷ ಮಾಡಿದರೆ ಸೋಲನ್ನು ಅನುಭವಿಸುತ್ತಿರಾ ಎಂಬುದನ್ನು ಇದನ್ನು ಈಗಾಗಲೇ ತೋರಿಸಿಕೊಡಲಾಗಿದೆ. ಬಿಜೆಪಿ ದಕ್ಷಿಣ ಭಾರತದಲ್ಲಿ ಗಟ್ಟಿಯಾಗಿ ನೆಲೆಯುರಲು ಭೋವಿ ಸಮಾಜ ಕೊಡುಗೆ ಅಪಾರ ಎಂಬುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಚಿತ್ರದುರ್ಗ ಹಾಗೂ ಕೋಲಾರ ಕ್ಷೇತ್ರದಲ್ಲಿ ಭೋವಿ ಸಮಾಜದ ವ್ಯಕ್ತಿಗಳಿಗೆ ಟಿಕೇಟ್ ನೀಡಬೇಕು ಎಂದು ಆಗ್ರಹಿಸಿದರು.
ಹಿಂದುಳಿದ, ಶೋಷಿತ ಸಮುದಾಯಗಳಿಗೆ ರಾಜಕೀಯ ಶಕ್ತಿಯನ್ನು ನೀಡಬೇಕಾದ ರಾಜಕೀಯ ಪಕ್ಷಗಳು ನಿರ್ಲಕ್ಷ ತೋರಿಸುತ್ತಿರುವುದು ಖಂಡನೀಯ. ಕೇವಲ ನಮ್ಮನ್ನು ಮತ ಹಾಕಲು ಬಳಸಿಕೊಳ್ಳಬೇಡಿ. ನಮ್ಮನ್ನು ಸಂಸತ್ ಭವನಕ್ಕೆ ಕಳಿಸಲು ಕೈ ಜೋಡಿಸಬೇಕಿತ್ತು. ಈ ನಿಟ್ಟಿನಲ್ಲಿ ನೀವು ಎಡವಿದ್ದಿರಾ. ಇದರ ಪರಿಣಾಮ ಮುಂದೆ ಅನುಭವಿಸ ಬೇಕಾಗುತ್ತದೆ. ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳಿಗೆ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಎಚ್ವರಿಸಿದ್ದು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ ಆದರೆ ಬಿ.ಫಾರಂ ನೀಡಲ್ಲ ಈಗಲೂ ಸಹಾ ಕಾಲ ವಿಂಚಿಲ್ಲ ನಮ್ಮ ಸಮಾಜಕ್ಕೆ ಟೀಕೇಟ್ ನೀಡುವುದರ ಬಗ್ಗೆ ಪಕ್ಷದ ವರಿಷ್ಠರು ಆಲೋಚನೆ ಮಾಡಬೇಕಿದೆ. ಇದೇ ರೀತಿ ಬಿಜೆಪಿ ಪಕ್ಷ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ ಅವರು ಸಹಾ ನಮ್ಮ ಸಮಾಜದವರಿಗೆ ಚಿತ್ರದುರ್ಗದಲ್ಲಿ ಟೀಕೇಟ್ ನೀಡುವುದರ ಮೂಲಕ ನಮ್ಮನ್ನು ಗುರುತಿಸಬೇಕಿದೆ ಎಂದು ತಿಳಿಸಿದರು, ಕಾಂಗ್ರೆಸ್ನಲ್ಲಾದರೆ ನೆರ್ಲಗುಂಟೆ ರಾಮಪ್ಪ, ಬಿಜೆಪಿಯಲ್ಲಾದರೆ ರಘುಚಂದನ್ ರವರಿಗೆ ಟೀಕೇಸ್ ನೀಡುವಂತೆ ಆಯಾ ಪಕ್ಷದ ವರಿಷ್ಟರಿಗೆ ಸೂಚಿಸಿದ್ದಾರೆ.
ಈಗಲೂ ಸಮಯ ಇದ್ದು, ಕೊಲಾರ ಹಾಗೂ ಚಿತ್ರದುರ್ಗ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಆಭ್ಯರ್ಥಿಗಳಿಗೆ ಟಿಕೇಟ್ ನೀಡಬೇಕು ಇಲ್ಲವಾದರೆ, ಮುಂದಿನ ತೀರ್ಮಾನವನ್ನು ರಾಜ್ಯ ಮಟ್ಟದಲ್ಲಿ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ನಡೆಸಬೇಕಾಗುತ್ತದೆ ಎಂದು ಎಚ್ವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡರಾದ ನೇರ್ಲಗುಂಟೆ ರಾಮಪ್ಪ, ಮೋಹನ್, ರುದ್ರಣ್ಣ, ಲಕ್ಷ್ಮಣ್, ಆಂಜನೇಯ, ತಿಮ್ಮಣ್ಣ, ಮಂಜುನಾಥ್, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.