ನವದೆಹಲಿ : ಲೋಕ ಸಭಾ ಚುನಾವಣೆ ಫಲಿತಾಂಶಕ್ಕೆ ಎಲ್ಲರೂ ಕಾತುರರಾಗಿದ್ದಾರೆ. ಈ ನಡುವೆ ಪ್ರತಿಯೊಂದು ಪಕ್ಷದವರು ನಾವು ಗೆಲ್ಲುತ್ತೇವೆ ನಾವು ಗೆಲ್ಲುತ್ತೇವೆ ಎನ್ನುವ ಚರ್ಚೆ ನಡೆಯುತ್ತಿದೆ.ಇದರ ನಡುವೆ ಎಲೆಕ್ಷನ್ ಬಳಿಕ ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುತ್ತದೆ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಈ ಬಗ್ಗೆ ಮೌನ ಮುರಿದ ಯೋಗಿ ಖಾಸಗಿ ಮಾಧ್ಯಮ ನಡೆಸಿದ ವಿಶೇಷ ಸಂವಾದದಲ್ಲಿ ಮಾತನಾಡಿದ ನಾನೊಬ್ಬ ಯೋಗಿ. ನನ್ನ ಆದ್ಯತೆ ಅಧಿಕಾರಕ್ಕಾಗಿ ಅಲ್ಲ ಆದರೆ ಪಕ್ಷದ ಮೌಲ್ಯಗಳು ಮತ್ತು ತತ್ವಗಳಿಗಾಗಿ ಕೆಲಸ ಮಾಡುವುದು ಎಂದಿದ್ದಾರೆ. 400 ಸ್ಥಾನ ದಾಟುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ‘ಇದು ನಂಬಿಕೆ ಅಲ್ಲ ಆದರೆ ಆಗಬೇಕು. ಇದು ದೇಶದ ಮಂತ್ರವಾಯಿತು. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ದೇಶದ ಪ್ರತಿಯೊಂದು ವರ್ಗ, ಪ್ರತಿ ಸಮುದಾಯದವರು ಈ ಘೋಷಣೆಯನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದಾರೆ, ಮೋದಿ ಜಿಯವರ ಜನಪ್ರಿಯತೆ ಮತ್ತು ಅವ್ರು ಮಾಡಿದ ಕೆಲಸಗಳನ್ನು ಕಳೆದ 10 ವರ್ಷಗಳಲ್ಲಿ ನೋಡಿದ ಜನತೆ ಭದ್ರತೆ, ಗೌರವ, ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿ ಮತ್ತು ಬಡವರ ಕಲ್ಯಾಣ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಜನತಾ ಜನಾರ್ದನ ಈ ಘೋಷಣೆಯನ್ನು ವಾಸ್ತವಕ್ಕೆ ತರುತ್ತಿದ್ದಾರೆ ಎಂದಿದ್ದಾರೆ. ಜೂನ್ 4 ರಂದು ಫಲಿತಾಂಶ ಬಂದಾಗ ಮತ್ತೊಮ್ಮೆ ನಾವು ಮೋದಿ ಸರ್ಕಾರ ಮತ್ತು ಎನ್‌ಡಿಎಯೊಂದಿಗೆ ಈ 400 ಸ್ಥಾನಗಳ ಗುರಿಯನ್ನು ಸಾಧಿಸುತ್ತೇವೆ ಎಂದು ಹೇಳಿದ್ದಾರೆ. ಕಳೆದ ಬಾರಿಯೂ ಕನೌಜ್ ಗೆದ್ದಿದ್ದೆವು, ಈ ಬಾರಿಯೂ ಗೆಲ್ಲುತ್ತೇವೆ ಎಂದರು. ಕಳೆದ ಬಾರಿಯೂ ಅಜಂಗಢದಲ್ಲಿ ಗೆದ್ದಿದ್ದೆವು, ಈ ಬಾರಿಯೂ ಗೆಲ್ಲುತ್ತೇವೆ. ಮೈನ್‌ಪುರಿಯಲ್ಲಿಯೂ ಬಿಜೆಪಿ ಗೆಲ್ಲಲಿದೆ. 80ರ ಸಂಖ್ಯಾಬಲ, ಈ ಬಾರಿ 400 ದಾಟಲಿದೆ ಎಂದಿದ್ದಾರೆ.