ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (LIC) ಸಂಸ್ಥೆಗೆ 84 ಕೋಟಿ ರೂ ದಂಡ ವಿಧಿಸಿ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿರುವುದು ತಿಳಿದುಬಂದಿದೆ. ಇದು ಮೂರು ಅಸೆಸ್ಮೆಂಟ್ ವರ್ಷಗಳಲ್ಲಿ ಎಲ್ಐಸಿ ಕಟ್ಟದೇ ಉಳಿದಿರುವ ತೆರಿಗೆ ಮೊತ್ತ ಎನ್ನಲಾಗಿದೆ. ಕಳೆದ ವಾರವೇ (ಸೆಪ್ಟೆಂಬರ್ 29) ಐಟಿ ನೋಟೀಸ್ ಜಾರಿಯಾಗಿದೆ. ಈ ಆದೇಶವನ್ನು ಪ್ರಶ್ನಿಸಿ ಎಲ್ಐಸಿ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ. ಈ ವಿಚಾರವನ್ನು ರೆಗ್ಯುಲೇಟರಿ ಫೈಲಿಂಗ್ನಲ್ಲಿ ಎಲ್ಐಸಿ ತಿಳಿಸಿದೆ.
2012-13, 2018-19 ಮತ್ತು 2019-20ರ ಅಸೆಸ್ಮೆಂಟ್ ವರ್ಷಗಳಲ್ಲಿ ಸರಿಯಾಗಿ ತೆರಿಗೆ ಪಾವತಿಸಿದೇ ಇರುವುದಕ್ಕೆ ಎಲ್ಐಸಿಗೆ ದಂಡ ವಿಧಿಸಲಾಗಿದೆ. 2012-13ರ ಅಸೆಸ್ಮೆಂಟ್ ವರ್ಷ, ಎಂದರೆ 2011-12ರ ಹಣಕಾಸು ವರ್ಷದಲ್ಲಿ 12.61 ಕೋಟಿ ರೂ ದಂಡ ಹಾಕಲಾಗಿದೆ. 2018-19ರ ಅಸೆಸ್ಮೆಂಟ್ ವರ್ಷಕ್ಕೆ 33.82 ಕೋಟಿ ರೂ ಹಾಗೂ 2019-20ರ ಹಣಕಾಸು ವರ್ಷಕ್ಕೆ 37.58 ಕೋಟಿ ರೂ ದಂಡ ವಿಧಿಸಲಾಗಿದೆ. 1961ರ ಐಟಿ ಕಾಯ್ದೆಯ 271(1)(ಸಿ) ಮತ್ತು 270ಎ ಸೆಕ್ಷನ್ಗಳ ನಿಯಮಗಳನ್ನು ಎಲ್ಐಸಿ ಉಲ್ಲಂಘಿಸಿದ್ದು, ಅದಕ್ಕೆ ದಂಡ ವಿಧಿಸಲಾಗಿದೆ ಎಂದು ಸೆಪ್ಟೆಂಬರ್ 29ರಂದು ಸಲ್ಲಿಸಿದ ನೋಟೀಸ್ನಲ್ಲಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಕಳೆದ ತಿಂಗಳು 290 ಕೋಟಿ ರೂ ಮೊತ್ತ ಪಾವತಿಸಲು ಜಿಎಸ್ಟಿ ನೋಟೀಸ್
ಕಳೆದ ಸೆಪ್ಟೆಂಬರ್ ತಿಂಗಳಲ್ಲೇ ಎಲ್ಐಸಿ ಸಂಸ್ಥೆಗೆ ಜಿಎಸ್ಟಿ ನೋಟೀಸ್ ನೀಡಲಾಗಿತ್ತು. ಒಟ್ಟು 290 ರೂ ಜಿಎಸ್ಟಿ ಕಟ್ಟಬೇಕಿದೆ ಎಂಬುದಾಗಿತ್ತು ಆ ನೋಟೀಸ್. 166.8 ಕೋಟಿ ರೂ ಜಿಎಸ್ಟಿ ಮೂಲ ಮೊತ್ತ, ಅದಕ್ಕೆ 107.1 ಕೋಟಿ ರೂ ಮೊತ್ತದ ತೆರಿಗೆ ಹಾಗೂ 16.7 ಕೋಟಿ ರೂ ಮೊತ್ತದ ದಂಡ ಒಟ್ಟು ಸೇರಿ 290 ಕೋಟಿ ರೂ ಹಣ ಕಟ್ಟಬೇಕಿದೆ ಎಂದು ತೆರಿಗೆ ಇಲಾಖೆ ಆಗ್ರಹಿಸಿತ್ತು. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ದುರ್ಬಳಕೆ ಸೇರಿದಂತೆ ಎಲ್ಐಸಿಯಿಂದ ವಿವಿಧ ನಿಯಮ ಉಲ್ಲಂಘನೆಗಳಾಗಿವೆ ಎಂಬ ಆರೋಪ ಇದೆ. ಅದಾದ ಬೆನ್ನಲ್ಲೇ ಎಲ್ಐಸಿಯ ಷೇರುಗಳು ಹಿನ್ನಡೆ ಕಂಡಿದ್ದವು. ಸೆಪ್ಟೆಂಬರ್ 28ರಿಂದ ಅದರ ಷೇರುಬೆಲೆ ಸತತವಾಗಿ ಕುಸಿಯುತ್ತಾ ಬರುತ್ತಿದೆ. 650 ರೂ ಇದ್ದ ಅದರ ಷೇರುಬೆಲೆ ಇದೀಗ 639 ರೂಗೆ ಇಳಿದಿದೆ.
ಭಾರತದ ನಂಬರ್ ಒನ್ ವಿಮಾ ಸಂಸ್ಥೆಯಾಗಿರುವ ಎಲ್ಐಸಿ 2022ರ ಮೇ ತಿಂಗಳಲ್ಲಿ ಷೇರುಪೇಟೆಯಲ್ಲಿ ಲಿಸ್ಟ್ ಆಗಿತ್ತು. 826 ರೂ ಇದ್ದ ಷೇರಿನ ಆರಂಭಿಕ ಬೆಲೆ ಇದೀಗ 186 ರೂಗೂ ಹೆಚ್ಚು ಮೊತ್ತದಷ್ಟು ಕುಸಿತ ಕಂಡಿದೆ.
ಅನಂತರ 22ರಂದು ಅವರು ಪಪುವಾ ನ್ಯೂಗಿನಿಯಾಗೆ ತೆರಳಿ ಇಲ್ಲಿ ಇಂಡಿಯಾ ಪೆಸಿಫಿಕ್ ದ್ವೀಪಗಳ ಸಹಕಾರ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂರನೇ ಹಂತದಲ್ಲಿ ಮೇ 23ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಅನಂತರ 22ರಂದು ಅವರು ಪಪುವಾ ನ್ಯೂಗಿನಿಯಾಗೆ ತೆರಳಿ ಇಲ್ಲಿ ಇಂಡಿಯಾ ಪೆಸಿಫಿಕ್ ದ್ವೀಪಗಳ ಸಹಕಾರ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂರನೇ ಹಂತದಲ್ಲಿ ಮೇ 23ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ.