ಬೆಂಗಳೂರು :ಎಲ್ಲರ ಸಹಕಾರ, ವಿಶ್ವಾಸ ತೆಗೆದುಕೊಂಡು ಕೆಲಸ ಮಾಡ್ತೀನಿ. ದ್ವೇಷ ಭಾವನೆ ಮಾಡದೇ, ಪ್ರೀತಿ ವಿಶ್ವಾಸದಿಂದ ಕೆಲಸ ಮಾಡ್ತೀನಿ ಎಂದು ನೂತನವಾಗಿ ಆಯ್ಕೆಯಾದ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಶಾಸಕಾಂಗ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,. ದ್ವೇಷ ಭಾವನೆ ಮಾಡದೇ, ಪ್ರೀತಿ ವಿಶ್ವಾಸದಿಂದ ಕೆಲಸ ಮಾಡುತ್ತೇನೆ. ಪಕ್ಷದ ಆದೇಶ, ಎಲ್ಲರ ಸಹಕಾರದಿಂದ ನಾಯಕನಾಗಿ ಆಯ್ಕೆ ಮಾಡಿದ್ದಾರೆ. ನಾನು ನಾಯಕ ಆದರೂ 66 ಜನ ಶಾಸಕರು ನಾಯಕರೇ ಎಂದರು.
ಯಡಿಯೂರಪ್ಪ ಮಾರ್ಗದರ್ಶನ, ಬೊಮ್ಮಾಯಿ ಸಹಕಾರ ಪಡೆದು ಮುನ್ನಡೆಯಬೇಕು. ಸೋತಿದ್ದೇವೆ ಅನ್ನೋದು ಬಿಟ್ಟು ಮತ್ತೆ ಕಮಲ ಅರಳುತ್ತೆ.ನಾನು 40 ವರ್ಷಗಳಿಂದ ಹೋರಾಟ ಮಾಡಿದ್ದೇನೆ. ಇಂದಿರಾಗಾಂಧಿ ವಿರೋಧಿಸಿ ಜೈಲಿಗೆ ಹೋಗಿದ್ದೇನೆ. ನರೇಂದ್ರ ಮೋದಿಯಂತಹ ನಾಯಕತ್ವ ಸಿಕ್ಕಿದೆ ಎಂದು ತಿಳಿಸಿದರು.
ಕಳೆದ 6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಿಎಂ ಮಗನೇ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಈ ಸ್ಥಿತಿಯಲ್ಲಿ 28 ಸ್ಥಾನ ಗೆಲ್ತೀವಿ. ಬೆಂಗಳೂರು ಗ್ರಾಮಾಂತರ ಸೇರಿ ಕನಕಪುರ ಸೇರಿ 28 ಕ್ಷೇತ್ರ ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಬ್ ಕಾ ಸಾಥ್… ಸಬ್ ಕಾ ವಿಕಾಸ್ ಮೋದಿ ಹೇಳಿಕೆಯಂತೆ ಕೆಲಸ ಮಾಡೋಣ. ಭ್ರಷ್ಟಾಚಾರ ಕಾಂಗ್ರೆಸ್ ತೊಲಗಿಸೋಣ. ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಕೆ ಕೆಲಸ ಮಾಡೋಣ ಎಂದು ಹೇಳಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.