ಬೆಂಗಳೂರು: ಇನ್ಮುಂದೆ ಎಲ್ಲಾ ನೇಮಕಾತಿ ಪರೀಕ್ಷೆಗಳಲ್ಲಿ ತಲೆ ಹೊದಿಕೆಯನ್ನು ಧರಿಸಿಕೊಂಡು ಬರುವ ಅಭ್ಯರ್ಥಿಗಳಿಗೆ ನಾವು ಈ ಸೂಚನೆಯನ್ನು ನೀಡಿದ್ದೇವೆ. ಇಂತಹ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚೆ ಬರಬೇಕು. ಕೇಂದ್ರದಲ್ಲಿ ಸಂಪೂರ್ಣ ಪರೀಕ್ಷೆ ಮಾಡಿದ ನಂತರವೇ ಕೊಠಡಿಯೊಳಗಡೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಸ್ಪಷ್ಟನೆ ನೀಡಿದ್ದಾರೆ.
ಮಂಗಳಸೂತ್ರ ಹಾಗೂ ಕಾಲುಂಗುರಗಳನ್ನು ಧರಿಸಿರಲು ಅವಕಾಶ ನೀಡಿರುವ ಪ್ರಾಧಿಕಾರ, ಪರೀಕ್ಷಾ ಕೇಂದ್ರದ ಒಳಗೆ ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್ ಸೇರಿ ಇನ್ನಿತರೆ ಗ್ಯಾಜೆಟ್ ಗಳನ್ನು ತರಬಾರದೆಂದೂ ಕಟ್ಟುನಿಟ್ಟಾಗಿ ಸೂಚಿಸಿದೆ. ಇತ್ತೀಚೆಗೆ ನಡೆದ ಪರೀಕ್ಷೆ ವೇಳೆ ಕಲಬುರಗಿಯಲ್ಲಿ ಮಹಿಳೆಯರ ಕತ್ತಿನಿಂದ ಮಂಗಳಸೂತ್ರ ತೆಗೆಸಲಾಗಿದ್ದನ್ನು ಸ್ಮರಿಸಿಕೊಳ್ಳಬಹುದು.!