ಬೆಂಗಳೂರು : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಜೀವನದ ಬಹುಮುಖ್ಯ ಘಟ್ಟ ಎಂದೇ ಗುರುತಿಸಲಾಗುತ್ತದೆ. ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳು ಕೂಡ ಅಷ್ಟೇ ಶಮ್ರ ಹಾಕಿರುತ್ತಾರೆ. ವರ್ಷವಿಡೀ ಓದಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಈಗ ಫಲಿತಾಂಶಕ್ಕಾಗಿ ಎದುರುನೋಡುತ್ತಿದ್ದು, ಫಲಿತಾಂಶ ಪ್ರಕಟವಾಗಲು ಕ್ಷಣಗಣನೆ ಆರಂವಾಗಿದೆ.
ಕೆಎಸ್‌ಇಎಬಿ 10ನೇ ತರಗತಿಯ ಫಲಿತಾಂಶಗಳು ಇಂದು (ಗುರುವಾರ) ಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿಯು ಘೋಷಣೆ ಮಾಡಿದೆ.
ಈ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಿ
ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ನೇರವಾಗಿ ಫಲಿತಾಂವನ್ನು ಪರಿಶೀಲಿಸಬಹುದು. kseab.karnataka.gov.in ನಲ್ಲಿ ನೇರ ಲಿಂಕ್ ಮೂಲಕ ಕೂಡ ಫಲಿತಾಂಶವನ್ನು ನೋಡಬಹುದಾಗಿದೆ.
2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾರ್ಚ್ 25ರಂದು ಆರಂಭವಾಗಿ ಏಪ್ರಿಲ್ 6 ರಂದು ಮುಕ್ತಾಯವಾಗಿತ್ತು. ರಾಜ್ಯಾದ್ಯಂತ ಸುಮಾರು 8 ಲಕ್ಷ ಅಭ್ಯರ್ಥಿಗಳು ಕರ್ನಾಟಕ 10 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗಿದ್ದರು.