ಬೆಂಗಳೂರು: ಎಸ್‌ಐಟಿ ಕಸ್ಟಡಿಯಲ್ಲಿರೋ ಶಾಸಕ ಎಚ್.ಡಿ ರೇವಣ್ಣ ಅವರಿಗೆ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ.
ಎಸ್‌ಐಟಿ ಅಧಿಕಾರಿಗಳು 30ಕ್ಕೂ ಹೆಚ್ಚು ಪ್ರಶ್ನೆಗಳನ್ನ ಮಾಡಿಟ್ಟುಕೊಂಡು ವಿಚಾರಣೆ ಆರಂಭಿಸಿದ್ದಾರೆ. ತನಿಖಾಧಿಕಾರಿ: ತಿಂಡಿ ತಿಂದ್ರಾ, ಆರೋಗ್ಯ ಹೇಗಿದೆ, ನಿಮ್ಮನ್ನು ವಿಚಾರಣೆ ಮಾಡಬಹುದಾ..? ರೇವಣ್ಣ: ಹುಃ.. ವಿಚಾರಣೆ ಮಾಡಿ
ತನಿಖಾಧಿಕಾರಿ: ನಿಮ್ಮ ಮೇಲೆ ಐಪಿಸಿ ಸೆಕ್ಷನ್ 364a ,365 ಅಡಿಯಲ್ಲಿ ಕಿಡ್ನ್ಯಾಪ್ ಪ್ರಕರಣ ದಾಖಲಾಗಿದೆ. ಕಿಡ್ನ್ಯಾಪ್ ಆದ ಸಂತ್ರಸ್ತೆಯ ಮಗ ನಿಮ್ಮ ವಿರುದ್ಧ ಕೆ.ಆರ್ ನಗರದಲ್ಲಿ ದೂರು ಕೊಟ್ಟಿದ್ದಾರೆ ಗೊತ್ತಾ. ರೇವಣ್ಣ: ಹುಃ ಸಾಹೇಬ್ರೆ ಗೊತ್ತು… ತನಿಖಾಧಿಕಾರಿ: ಸಂತ್ರಸ್ತ ಮಹಿಳೆ ನಿಮಗೆ ಗೊತ್ತಾ? ರೇವಣ್ಣ: ಐದಾರು ವರ್ಷ ನಮ್ಮ ಬಳಿ ಕೆಲಸ ಮಾಡಿದ್ರು.
ತನಿಖಾಧಿಕಾರಿ: ನಿಮ್ಮ ಮಗನ ವಿಡಿಯೋ ಹೊರ ಬಂದ ಬಳಿಕ ಮಹಿಳೆಯನ್ನು ಕರೆದುಕೊಂಡು ಹೋಗಿದ್ರಾ? ರೇವಣ್ಣ: ನನಗೆ ಆ ವಿಚಾರ ಗೊತ್ತಿಲ್ಲ ತನಿಖಾಧಿಕಾರಿ: ಸತೀಶ್ ಬಾಬಣ್ಣ ಯಾರು ರೇವಣ್ಣ: ಗೊತ್ತಿರುವ ಮನುಷ್ಯ
ತನಿಖಾಧಿಕಾರಿ: ಕಳೆದ 29ನೇ ತಾರೀಖು ರಾತ್ರಿ 9:30.ಕ್ಕೆ ಮಹಿಳೆಯನ್ನ ಅವರ ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. ಅದೂ ರೇವಣ್ಣ ಸಾಹೇಬ್ರು ಹೇಳಿದ್ರು ಅಂತಾ ಸತೀಶ್ ಬಾಬಣ್ಣ ಹೇಳಿ ಕರೆದುಕೊಂಡು ಹೋಗಿದ್ದಾರೆ. ರೇವಣ್ಣ: ಅವ್ರು ಏನ್ ಮಾಡಿದ್ದಾರೆ ನನಗೆ ಗೊತ್ತಿಲ್ಲ.
ತನಿಖಾಧಿಕಾರಿ: ಕಿಡ್ನ್ಯಾಪ್ ಬಳಿಕ ನಾಲ್ಕೈದು ದಿನ ಮಹಿಳೆಯನ್ನ ಎಲ್ಲೆಲ್ಲಿ ಇಟ್ಟಿದ್ರಿ..? ರೇವಣ್ಣ: ನಂಗೆನೂ ಗೊತ್ತಿಲ್ಲ. ತನಿಖಾಧಿಕಾರಿ: ಸಂತ್ರಸ್ತ ಮಹಿಳೆಯನ್ನ ಕಿಡ್ನ್ಯಾಪ್ ಮಾಡಿ ತೋಟದ ಮನೆಯಲ್ಲಿ ಇರಿಸಿದ್ರಾ..? ರೇವಣ್ಣ: ನಾನು ಕಿಡ್ನ್ಯಾಪ್ ಮಾಡುವಂತೆ ಹೇಳಿಲ್ಲ. ಅವರು ಎಲ್ಲಿದ್ರು ಅಂತಾನು ನನಗೆ ಗೊತ್ತಿರಲಿಲ್ಲ.
ತನಿಖಾಧಿಕಾರಿ: ಸಂತ್ರಸ್ತೆಯ ಮಗ ನಿಮ್ಮ ಮೇಲೆ ಆರೋಪ ಮಾಡಿದ್ದಾರೆ. ರೇವಣ್ಣ: ಆತ ಯಾಕ್ ನನ್ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ಇದು ದುರುದ್ದೇಶದಿಂದ ಇರಬಹುದು. ತನಿಖಾಧಿಕಾರಿ: ಸಂತ್ರಸ್ತ ಮಹಿಳೆಗೆ ಕಿರುಕುಳ ಕೊಟ್ಟಿದ್ದಾರಲ್ಲ. ರೇವಣ್ಣ: ಯಾರು ಕೊಟ್ರು ನನಗೇನು ಗೊತ್ತಿಲ್ಲ
ತನಿಖಾಧಿಕಾರಿ: ಸತೀಶ್ ಬಾಬಣ್ಣ ಹೇಳಿದ್ದಾರಲ್ಲ ನಿಮ್ಮ ರೋಲ್ ಇದೆ ಅಂತ ರೇವಣ್ಣ: ನಾನು ಕಿಡ್ನ್ಯಾಪ್ ಮಾಡಿಸಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ.