ಚಿತ್ರದುರ್ಗ ; ಚಿತ್ರದುರ್ಗದ ಎಸ್ ಜೆ ಎಂ ಫಾರ್ಮಸಿ ಕಾಲೇಜಿಗೆ ಮತ್ತೆ ಪ್ರಾಂಶುಪಾಲರಾಗಿ ಮರುನೇಮಕ ಮಾಡಿಕೊಳ್ಳಬೇಕು ಹಾಗೂ ಅವರಿಗೆ ಎಲ್ಲಾ ಸೇವಾ ಸೌಲಭ್ಯಗಳನ್ನು ನೀಡಿ 2007 ರಿಂದ ಇಲ್ಲಿಯವರೆಗೂ 50% ವೇತನವನ್ನು ನೀಡಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ನೀಡಿದೆ.
ಕಳೆದ 15 ವರ್ಷಗಳಿಂದ ಕಾನೂನು ಸಮರದಲ್ಲಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ.ಎಚ್ ಕೆ ಎಸ್ ಸ್ವಾಮಿಯವರಿಗೆ ಕೋರ್ಟ್ ಆದೇಶ ನೀಡಿದೆ.
ಕಳೆದ 15 ವರ್ಷಗಳಿಂದ ಎಸ್ ಜೆ ಎಂ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಡಾ. ಎಚ್ ಕೆ ಎಸ್ ಸ್ವಾಮಿಯವರು ಎಂ.ಫಾರ್ಮ.ಪಿ.ಹೆಚ್.ಡಿ. ಪದವೀಧರರಾಗಿದ್ದರ. ಅವರನ್ನು ಎಸ್. ಜೆ ಎಂ. ಆಡಳಿತ ಮಂಡಳಿಯ ಆಡಳಿತಾಧಿಕಾರಿಗಳಾದ ಶ್ರೀ. ಎಮ್. ಚಿತ್ರಶೇಖರ್ ರವರು ಪ್ರಾಂಶುಪಾಲರನ್ನಾಗಿ 2007 ನೇಮಕ ಮಾಡಿ, ಬಡ್ತಿ ನೀಡಿದ್ದರು, ಆದರೆ ಅವರಿಗೆ ಕರ್ತವ್ಯ ನಿರ್ವಹಿಸಲು ಮತ್ತು ವೇತನ ಪಡೆಯಲು ಅವಕಾಶ ನೀಡದಿದ್ದರಿಂದ ತಮಗಾದ ಅನ್ಯಾಯವನ್ನು ಸರಿಪಡಿಸಲು ಹೈಕೋರ್ಟಿನ ಮೊರೆಹೋಗಿದ್ದರು. 15 ವರ್ಷ ನಡೆದ ಕಾನೂನು ಸಮರದಲ್ಲಿ ಈಗ ಮತ್ತೆ ಡಾ ಸ್ವಾಮಿಯವರಿಗೆ ಪ್ರಾಂಶುಪಾಲರಾಗಿ ಮರುನೇಮಕ ಮಾಡಿ, ಅವರಿಗೆ 2007 ರಿಂದ ಇಲ್ಲಿಯವರೆಗೂ 50% ವೇತನವನ್ನು ನೀಡಿ, ಸೇವಾ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ಹೈಕೋರ್ಟ್ ಆದೇಶ ನೀಡಿದೆ.