ಡೆಹ್ರಾಡೂನ್ : ಸಮಾಜದ ಎಲ್ಲಾ ವರ್ಗಗಳ ಜನರನ್ನು ಅವರ ಧರ್ಮ ಲೆಕ್ಕಿಸದೆ ರಾಷ್ಟ್ರೀಯ ನಾಗರಿಕ ಸಂಹಿತೆ ಪ್ರಕಾರ ಸಮಾನವಾಗಿ ಪರಿಗಣಿಸುವುದೇ ಆಗಿದೆ. ಇದು ಎಲ್ಲರಿಗೂ ಏಕರೂಪವಾಗಿ ಅನ್ವಯಿಸುತ್ತದೆ. ಮದುವೆ ವಿಚ್ಛೇದನ,ನಿರ್ಹಣೆ, ಉತ್ತರಾಧಿಕಾ ಮತ್ತು ಆಸ್ತಿಯ ಉತ್ತರಾಧಿಕಾರದಂತಹ ಹಲವು ವಿಷಯಗಳು ಇದರ ಅಡಿಗೆ ಒಳಪಡುತ್ತವೆ. ಆಧುನಿಕತೆಯಲ್ಲಿ ಧರ್ಮ ಮತ್ತು ಕಾನೂನಿನ ನಡುವೆ ಯಾವುದೇ ಸಂಬಂಧವಿಲ್ಲ ಎಂಬ ಪ್ರಮೇಯವನ್ನು ಇದು ಆಧರಿಸಿದೆ. ಹೌದು ಉತ್ತರಾಖಂಡ ಸಚಿವ ಸಂಪುಟ ಭಾನುವಾರ ಅತಿ ಮಹತ್ವದ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ಒಪ್ಪಿಗೆ ನೀಡಿದೆ. ಇದರಿಂದಾಗಿ ಇಂದು ಆರಂಭವಾದ ವಿಧಾನಸಭಾ ವಿಶೇಷ ಅಧಿವೇಶನದಲ್ಲಿ ಇದರ ಮಂಡನೆಗೆ ವೇದಿಕೆ ಸಿದ್ಧವಾಗಿದೆ. ಇದು ವಿಧಾನಸಭೆಯಲ್ಲೂ ಪಾಸಾದರೆ, ಸ್ವಾತಂತ್ರ್ಯಾನಂತರ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಖ್ಯಾತಿಗೆ ಉತ್ತರಾಖಂಡ ಭಾಜನವಾಗಲಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಸಂಪುಟ ಸಭೆಯಲ್ಲಿ ನ್ಯಾ। ರಂಜನಾ ಪ್ರಕಾಶ್ ದೇಸಾಯಿ ಅವರ ಸಮಿತಿ ಇತ್ತೀಚೆಗೆ ಸಲ್ಲಿಸಿದ ಸಂಹಿತೆಯ ಅಧ್ಯಯನ ವರದಿಯ ಬಗ್ಗೆ ಚರ್ಚಿಸಿ, ಅದರ ಮಂಡನೆಗೆ ಒಪ್ಪಿಗೆ ನೀಡಲಾಯಿತು. ಮಂಗಳವಾರ ಮಂಡನೆಗೆ ತೀರ್ಮಾನಿಸಲಾಯಿತು. ಶನಿವಾರ ಸಂಪುಟದಲ್ಲಿ ಇದು ಮಂಡನೆಯಾದರೂ ನಿರ್ಣಯ ಮುಂದೂಡಲಾಗಿತ್ತು. ಇದು ಜಾರಿಯಾದರೆ ರಾಜ್ಯದಲ್ಲಿ ಮದುವೆ, ವಿಚ್ಛೇದನ, ಆಸ್ತಿ ಹಕ್ಕು- ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಧರ್ಮಗಳಿಗೂ ಒಂದೇ ಕಾನೂನು ಅನ್ವಯವಾಗಲಿದೆ. ಈವರೆಗೂ ಆಯಾ ಧರ್ಮಗಳು ಬೇರೆ ಬೇರೆ ವೈಯಕ್ತಿಕ ಕಾನೂನು ಅನುಸರಿಸುತ್ತಿದ್ದವು. ಇದು ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗುತ್ತಿತ್ತು. ಏನಿದು ಏಕರೂಪ ನಾಗರಿಕ ಸಂಹಿತೆ? ಎಲ್ಲಾ ಧರ್ಮೀಯರಿಗೂ ವಿವಾಹ, ವಿಚ್ಛೇದನ, ಆಸ್ತಿ, ಭೂಮಿ ಮತ್ತು ಉತ್ತರಾಧಿಕಾರ ಕುರಿತು ವಿವಿಧ ಧರ್ಮಗಳಲ್ಲಿ ಪ್ರತ್ಯೇಕ ನಿಯಮಗಳಿವೆ. ಅದನ್ನೆಲ್ಲಾ ರದ್ದುಪಡಿಸಿ ಒಂದೇ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆ. ಏಕರೂಪ ಸಂಹಿತೆ: ಏನು ಶಿಫಾರಸು? ಯುವತಿಯವರಿಗೆ ವಿವಾಹದ ವಯಸ್ಸು 18, ಯುವಕರಿಗೆ 21 ವರ್ಷ ಎಲ್ಲಾ ರೀತಿಯ ವಿವಾಹ ನೋಂದಣಿ ಮಾಡುವುದು ಕಡ್ಡಾಯ ವಿಚ್ಛೇದನ ಕೋರಲು ಪತಿ, ಪತ್ನಿ ಇಬ್ಬರಿಗೂ ಸಮಾನ ನಿಯಮ ಅನ್ವಯ ಪತಿ/ಪತ್ನಿ- ಇಬ್ಬರೂ ಜೀವಂತ ಇರುವಾಗ 2ನೇ ಮದುವೆ ಸಾಧ್ಯವಿಲ್ಲ. ಅಂದರೆ ಬಹು ಪತ್ನಿತ್ವ, ಬಹುಪತಿತ್ವಕ್ಕೆ ಬ್ರೇಕ್ ನಿಖಾ ಹಲಾಲಾ, ತ್ರಿವಳಿ ತಲಾಖ್, ಇದ್ದತ್‌ನಂಥ ವಿಚ್ಛೇದನ ಪದ್ಧತಿ ನಿಷೇಧ ಆಸ್ತಿ, ಉತ್ತರದಾಯಿತ್ವದಲ್ಲಿ ಗಂಡು ಮಕ್ಕಳಷ್ಟೇ, ಹೆಣ್ಣು ಮಕ್ಕಳಿಗೂ ಸಮಾನ ಪಾಲು ಲಿವ್ ಇನ್ ಸಂಬಂಧವನ್ನು ಸ್ವಯಂ ಘೋಷಣೆ ಮೂಲಕ ಪ್ರಕಟಿಸುವುದು ಅಗತ್ಯ ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ ಹೊಂದಿರುವ ಆದಿವಾಸಿಗಳು ಸಂಹಿತೆ ವ್ಯಾಪ್ತಿಗಿಲ್ಲ.