ಬಿಸಿಲಿನ ಶಾಖದ ಹೊಡೆತದಿಂದಾಗಿ ದೇಹ ತನ್ನ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಹೀಟ್ ಸ್ಟೋಕ್ ಉಂಟಾಗುತ್ತದೆ.
ದೇಹದ ಉಷ್ಣತೆಯು ವೇಗವಾಗಿ ಹೆಚ್ಚಾಗುತ್ತದೆ. ಶಾಖ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ.
ದೇಹದ ಬೆವರುವಿಕೆಯ ಕಾರ್ಯವಿಧಾನವೂ ವಿಫಲಗೊಳ್ಳುತ್ತದೆ. ವ್ಯಕ್ತಿ ಬೆವರುವುದಿಲ್ಲ. ಹೀಟ್-ಸ್ಟೋಕ್ ಹೊಡೆದ ನಂತರ 10ರಿಂದ 15 ನಿಮಿಷಗಳಲ್ಲಿ ದೇಹದ ಉಷ್ಣತೆ 106″`ಗಿಂತ ಹೆಚ್ಚಾಗುತ್ತದೆ.
ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಅಂಗಾಂಗಗಳ ವೈಫಲ್ಯಕ್ಕೆ ಅಥವಾ ಮುಂದುವರಿದು ಸಾವಿಗೆ ಕಾರಣವಾಗಬಹುದು.