ಮುಂಬೈ:ಬಾಲಿವುಡ್ ಖ್ಯಾತ ನಟಿ ವಿದ್ಯಾ ಬಾಲನ್ ನನ್ನ ದೇಹದ ಬಗ್ಗೆ ಯಾರಾದರೂ ಮಾತನಾಡಿದರೆ ಬೇಸರವಾಗುತ್ತದೆ ಎಂದು ಬಾಲಿವುಡ್ ಖ್ಯಾತ ನಟಿ ವಿದ್ಯಾ ಬಾಲನ್ ಹೇಳಿದ್ದಾರೆ.
ಮನುಷ್ಯರು ದಪ್ಪಗಾಗುವುದು ಅಥವಾ ತೆಳ್ಳಗಾಗುವುದು ಒಂದೊಂದು ಸಾರಿ ಅವರ ಆಯ್ಕೆ ಆಗಿರುವುದಿಲ್ಲ. ನಾನಾ ಕಾರಣಗಳಿಂದಾಗಿ ಹಾಗೆ ಆಗುತ್ತದೆ. ಅದನ್ನೇ ಇಟ್ಟುಕೊಂಡು ಯಾರಿಗೂ ನೋವು ಮಾಡಬಾರದು ಎಂದಿದ್ದಾರೆ.
ಇತ್ತೀಚೆಗಷ್ಟೇ ತಮಗಾದ ನೋವಿನ ಘಟನೆಯನ್ನೂ ಹಂಚಿಕೊಂಡಿರುವ ವಿದ್ಯಾ ಬಾಲನ್, ‘ನಾನು ಮಸಾಜ್ ಪಾರ್ಲರ್ ವೊಂದಕ್ಕೆ ಹೋಗಿದ್ದೆ. ಅಲ್ಲಿದ್ದವರು ನನ್ನನ್ನು ನೋಡಿ, ಏನ್ ಮೇಡಂ ಮತ್ತೆ ದಪ್ಪಾದ್ರಾ ಅಂದ್ರು. ಅವರ ಮಾತು ಕೇಳಿ ನನಗೆ ಸಾಕಷ್ಟು ಬೇಸರವಾಯಿತು. ನಾನು ಹೋಗಿದ್ದು ಮಸಾಜ್ ಪಾರ್ಲರ್ ಗೆ, ಅವರಿಂದ ಈ ಮಾತನ್ನು ಕೇಳಿಸಿಕೊಳ್ಳುವುದಕ್ಕೆ ಅಲ್ಲ’ ಎಂದಿದ್ದಾರೆ.