ಬೆಂಗಳೂರು: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಟೋಲ್ ದರವು ಏಪ್ರಿಲ್ 1ರಿಂದ ಶೇಕಡ ಮೂರರಷ್ಟು ಹೆಚ್ಚಳವಾಗಲಿದೆ.
ಹೌದು. ಇನ್ಮುಂದೆ ಉಭಯ ನಗರಗಳ ನಡುವಿನ ಪ್ರಯಾಣವು ದುಬಾರಿಯಾಗಲಿದೆ ಹಾಗೂ ವಾಹನ ಚಾಲಕರ ಜೇಬಿಗೆ ಮತ್ತೆ ಕತ್ತರಿ ಮತ್ತೆ ಬೀಳಲಿದೆ. 2023ರ ಮಾರ್ಚ್ ನಲ್ಲಿ ಬೆಂಗಳೂರು ಮೈಸೂರು ಹೆದ್ದಾರಿ ಲೋಕಾರ್ಪಣೆಗೊಂಡಿತ್ತು.
ಕೇವಲ ಒಂದು ವರ್ಷದಲ್ಲೇ ಎರಡು ಬಾರಿ ಟೋಲ್ ದರ ಹೆಚ್ಚಿಸಲಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಶೇಕಡ 22ರಷ್ಟು ದರ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ಏಪ್ರಿಲ್ ಒಂದರಿಂದ ಶೇಕಡ ಮೂರರಷ್ಟು ಟೋಲ್ ದರ ಹೆಚ್ಚಳವಾಗಲಿದೆ.
ಇನ್ನು ಶುಲ್ಕ ಹೆಚ್ಚಳದ ಬಗ್ಗೆ ಟೋಲ್ ಸಿಬ್ಬಂದಿಯು ಕರಪತ್ರ ಹಂಚುತ್ತಿದ್ದಾರೆ ಹಾಗೂ ದರಪಟ್ಟಿ ಫಲಕ ತಿದ್ದುಪಡಿ ಮಾಡುತ್ತಿದ್ದಾರೆ. ವರ್ಷಕ್ಕೆ ಎರಡು ಬಾರಿ ಟೋಲ್ ದರವನ್ನೇನೋ ಹೆಚ್ಚಳ ಮಾಡುತ್ತಿದ್ದಾರೆ. ಆದರೆ ಪ್ರಯಾಣಿಕರಿಗೆ ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ.