ಬೆಂಗಳೂರು: ಏಪ್ರಿಲ್.29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2 ಆರಂಭಗೊಳ್ಳಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣ, ಉತ್ತರ ಅಂಕ ಗಳಿಸೋದಕ್ಕೆ ಪರೀಕ್ಷೆ ರಿಜೆಕ್ಟ್ ಮಾಡಿರೋರು, ಪರೀಕ್ಷೆ ಬರೆಯದೇ ಇರೋರು ಈಗ ಪರೀಕ್ಷೆ-2ಕ್ಕೆ ಹಾಜರಾಗಿ ಬರೆಯಬಹುದಾಗಿದೆ. ಈ ವಿದ್ಯಾರ್ಥಿಗಳಿಗಾಗಿ ಪ್ರವೇಶ ಪತ್ರವನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ಶಾಲಾ ಪರೀಕ್ಷೆಗಳ ಇಲಾಖೆಯಿಂದ ಈ ಮಾಹಿತಿ ನೀಡಲಾಗಿದ್ದು, ಏಪ್ರಿಲ್.29ರಿಂದ ಆರಂಭಗೊಳ್ಳಲಿರುವಂತ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಪ್ರವೇಶ ಪತ್ರವನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳು ಇಲಾಖೆಯ ವೆಬ್ ಸೈಟ್ https://kseab.karnataka.gov.inಕ್ಕೆ ಭೇಟಿ ನೀಡಿ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಹೇಳಿದೆ.