ಹೊಸ ಪಡಿತರ ಚೀಟಿ ಪಡೆಯಲು ಏಪ್ರಿಲ್ 1ರಿಂದ ಅರ್ಜಿ ಸಲ್ಲಿಕೆ ಶುರುವಾಗುವ ಸಾಧ್ಯತೆಯಿದೆ.
ಇನ್ನು ಹೊಸ ರೇಷನ್ ಕಾರ್ಡ್ ಪಡೆಯಲು ಮನೆ ವಿಳಾಸ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ವೋಟರ್ ಗುರುತಿನ ಪತ್ರ, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್ ಅಳತೆಯ ಫೋಟೋ, ಮೊಬೈಲ್ ನಂಬರ್ ಮತ್ತಿತರ ದಾಖಲೆಯಿರಬೇಕು.
ಕಾರ್ಡ್ ಪಡೆಯಲು ವ್ಯಕ್ತಿಯು ಭಾರತದ ನಾಗರಿಕ ಹಾಗೂ ನಮ್ಮ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
ಈಗಾಗಲೇ ಕಾರ್ಡ್ಇದ್ದವರಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಮದುವೆಯಾದ ನವದಂಪತಿ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಬಹುದು.