ಚಿತ್ರದುರ್ಗ: ಚಿತ್ರದುರ್ಗ ನಗರದ ರಂಗಯ್ಯನ ಬಾಗಿಲು ಬಳಿಯಲ್ಲಿನ ಶ್ರೀ ಉಜ್ಜಯನಿ ಮಠದಲ್ಲಿ ಲಿಂ|| ಮರುಳಾರಾಧ್ಯ ಶಿವಾಚಾರ್ಯ ಮಹಾಭಗವತ್ಪಾದರ 29ನೇ ವರ್ಷದ ಪುಣ್ಯ ಸ್ಮರಣೋತ್ಸವ, ವಟುಗಳಿಗೆ ಲಿಂಗದೀಕ್ಷಾ ಮತ್ತು 108 ಜನ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಏ. 13 ರಂದು ನಡೆಯಲಿದೆ ಎಂದು ಉಜ್ಜಯಿನಿ ಮಠದ ಕಾರ್ಯದರ್ಶಿಗಳಾದ ಈಶ್ವರ ಪ್ರಸಾದ್ ತಿಳಿಸಿದ್ದಾರೆ.
ಏ. 13ರ ಶನಿವಾರ ಬೆಳಿಗ್ಗೆ 5 ಗಂಟೆಗೆ ಬ್ರಾಹ್ಮೀ ಮೂಹರ್ತದಲ್ಲಿ ವಟುಗಳಿಗೆ ಲಿಂಗಾದೀಕ್ಷಾ ಕಾರ್ಯಕ್ರಮ ನಡೆಯಲಿದ್ದು, ತದ ನಂತರ ಲಿಂ|| ಜಗದ್ಗುರುಗಳ ಕತೃ ಗದ್ದುಗೆಗೆ ಹಾಗೂ ಶ್ರೀ ಮರುಳು ಸಿದ್ದೇಶ್ವರ ಸ್ವಾಮಿಗೆ ಮಹಾ ರುದ್ರಾಭೀಷೇಕ ಸಹಸ್ರ ಬಿಲ್ವಾರ್ಚನೆ ಮಹಾ ಮಂಗಳಾರತಿ ನಡೆಯಲಿದೆ. ಪುಣ್ಯ ಸ್ಮರಣೆಯ ಅಂಗವಾಗಿ ಶ್ರೀಮಠದ ಶಕ್ತಿ ದೇವತೆಯಾದ ಚೌಡೇಶ್ವರಿ ಅಮ್ಮನವರ ಅಪ್ಪಣೆಯ ಮೇರೆಗೆ ಬೆಳ್ಳಿಗೆ 10 ಗಂಟೆಗೆ 108 ಜನ ಮುತೈದೆಯವರಿಗೆ ಉಡಿ ತುಂಬುವ ಕಾರ್ಯವನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮಧ್ಯಾಹ್ನ 12ಕ್ಕೆ ಜನಜಾಗೃತಿ ಮತ್ತು ಧರ್ಮಸಭಾ ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರದ ಕರೇವಾಡಿ ಮಠದ ಶ್ರೀ ಮಳೆ ಮಲ್ಲಿಕಾರ್ಜನ ಶಿವಾಚಾರ್ಯ ಶ್ರೀಗಳು, ಮುಸ್ಟೂರಿನ ಓಂಕಾರೇಶ್ವರ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಶ್ರೀಗಳು, ಮೈಸೂರಿನ ಆರಮನೆ ಜಪದಕಟ್ಟೆ ಮಠ ಹಾಗೂ ಬನ್ನಿಕೊಪ್ಪದ ಹಿರೇಮಠದ ಶ್ರೀ ಡಾ.ಸುಜ್ಞಾನದೇವ ಶಿವಾಚಾರ್ಯ ಶ್ರೀಗಳು, ಉಕ್ಕಡಗಾತ್ರಿಯ ಶ್ರೀ ಹಾಲಶಂಕರ ಶಿವಾಚಾರ್ಯ ಶ್ರೀಗಳು ಹಾಗೂ ಚಿತ್ರದುರ್ಗದ ಉಜ್ಜಯನಿಮಠದ ನಿಯೋಜಿತ ಉತ್ತರಾಧಿಕಾರಿಗಳಾದ ಅಭೀಷೇಕ ದೇವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಕರ್ನಾಟಕ ಸಂಸ್ಕøತ ವಿಶ್ವ ವಿದ್ಯಾಲಯದ ಪ್ರಭಾರ ಕುಲಪತಿಗಳಾದ ಪ್ರೋ.ವಿ.ಗೀರೀಶ್ ಚಂದ್ರ ರವರು ಉದ್ಘಾಟನೆಯನ್ನು ನೇರವೇರಿಸಲಿದ್ದಾರೆ.