ನವದೆಹಲಿ: 2025ರಲ್ಲಿ ಇಸ್ರೋ ಐತಿಹಾಸಿಕ ಗಗನಯಾನ ಮಾಡಲು ಮಾನವ ಸಹಿತ ಗಗನಯಾನ ಮಾಡಲು ಹೆಸರು ಫೈನಲ್ ಆಗಿದೆ. ಕ್ಯಾಪ್ಟನ್ ಶುಭಾಂಶು ಶುಕ್ಲಾ ಹೆಸರು ಫೈನಲ್ ಮಾಡಿದ ಇಸ್ರೋ, ಹೆಚ್ಚುವರಿ ಗಗನಯಾತ್ರಿಯಾಗಿ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಕೂಡ ಆಯ್ಕೆ ಆಗಿದ್ದಾರೆ. 2025ರ ಏಪ್ರಿಲ್‌ನಲ್ಲಿ ಗಗನಯಾನ ಸಾಧ್ಯತೆ ಇದ್ದು ಅಮೆರಿಕ, ರಷ್ಯಾ ಮತ್ತು ಚೀನಾ ಬಳಿಕ ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವ ಜಗತ್ತಿನ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ..
