ಐತಿಹಾಸಿಕ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ 1996-98ನೆಯ ಬ್ಯಾಚ್ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ.!

WhatsApp
Telegram
Facebook
Twitter
LinkedIn

ಚಿತ್ರದುರ್ಗ: ಐತಿಹಾಸಿಕ ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ ಹಾಗೂ 1996-98ನೆಯ ಬ್ಯಾಚ್ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಯಶಸ್ವಿಯಾಗಿ ನಡೆಯಿತು.

26ವರ್ಷಗಳ ಹಿಂದೆ ಇದೇ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಎನ್ ಡಿ ಕುಮಾರ್, ರವಿ ಎಚ್.ವಿ, ಅಕ್ಬರ್, ಪುಷ್ಪಾರಾಣಿಯವರ ನೇತೃತ್ವದಲ್ಲಿ ಒಂದು ಗುಂಪು ಮಾಡಿ ಈ ಸಂಕಲ್ಪ ಮಾಡಿದ್ದರು. ಇಂದು ಪರಸ್ಪರ ಭೇಟಿಯಾಗಿ ತಮಗೆ ಕಲಿಸಿದ ಗುರುಗಳ ನೆನಪಿಸಿ ಕರೆದು ಗೌರವಿಸಿ, ಸನ್ಮಾನಿಸಿದರು. ತಮ್ಮ ಸದ್ಯದ ಉದ್ಯೋಗ ಕೆಲಸಗಳನ್ನು ಗುರುಗಳೊಂದಿಗೆ ಹಂಚಿಕೊಂಡರು. ಹೊನ್ನಾರೆಡ್ಡಿ, ಬಣಕಾರ್, ಗೋಪಾಲ್, ವಿವೇಕಾನಂದ, ಮಂಜುನಾಥ್ ಉಪನ್ಯಾಸಕರು ವಿದ್ಯಾರ್ಥಿಗಳ ಈ ಸಮಯೋಚಿತ ನಿರ್ಧಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಗುರುಶಿಷ್ಯರ ಅಪರೂಪದ ಮಾತುಕತೆಯ ನಡುವೆ ಹಾಡು, ತಮಾಷೆ, ಸ್ವಾರಸ್ಯಕರ ಪ್ರಸಂಗಗಳೂ ಬಂದುಹೋದವು.

ರಸಾಯನ ಶಾಸ್ತ್ರ ಉಪನ್ಯಾಸಕರಾದ ಗೋಪಾಲ್ ಮಾತನಾಡಿ ನೆನಪು ಸಾವಿರ ನೆನಪಾಗಿ ಒಬ್ಬೊಬ್ಬರ ಪರಿಚಯದಲ್ಲಿ ಮೂಡಿಬಂದಿತು. ಹದಿನಾರನೆಯ ವಯಸ್ಸಿನಲ್ಲಿ ಕನಸುಕಂಗಳೊಂದಿಗೆ ಹೆಜ್ಜೆಯಿರಿಸಿದ್ದ ನೀವು ಈಗ ಜವಾಬ್ದಾರಿಯ ಹೊತ್ತಿರುವ ಭಾರತದ ಹೆಮ್ಮೆಯ ಪ್ರಜೆಗಳಾಗಿದ್ದೀರಿ ಅಂದರು

ವೇದಿಕೆ ಕಾರ್ಯಕ್ರಮವನ್ನು ಹೊನ್ನಾರೆಡ್ಡಿ ಸರ್ ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟನೆ ಮಾಡಿ ಗುರುಗಳ ನೆನಪಿಸಿಕೊಳ್ಳುವ ಸಂಪ್ರದಾಯ ಅಪರೂಪವಾದದ್ದು ಅಗತ್ಯವಾದದ್ದು ಎಂದರು.

ವಿವೇಕಾನಂದ ಸರ್ ಹೆತ್ತವರ ಚೆನ್ನಾಗಿ ನೋಡಿಕೊಳ್ಳಿ ಮಾದರಿಯಾಗಿ ಎಂದು ಸಲಹೆ ನೀಡಿದರು. ಸೀತಣ್ಣ ಸರ್ ಹಾಡನ್ನೂ ಹಾಡಿ ಲವಲವಿಕೆಯಲ್ಲಿ ಎಲ್ಲರನ್ನೂ ಆಶೀರ್ವದಿಸಿದರು. ಮಂಜುನಾಥ ಸರ್ ತಮ್ಮ ಹಿರಿಯ ಸಹೋದ್ಯೋಗಿಗಳನ್ನು ಮೆಚ್ಚುತ್ತಲೇ ನಮ್ಮ ಮುಂದಿನ ನಡೆ ಆರೋಗ್ಯಕರವಾಗಿರಲಿ ಪ್ರಬುದ್ಧವಾಗಿರಲಿ ಎಂದರು.

ಪುಷ್ಪರಾಣಿ ನಿರೂಪಿಸಿದರೆ, ಎನ್ ಡಿ ಕುಮಾರ್ ಪ್ರಾಸ್ತಾವಿಕ ನುಡಿದರು. ತಿಪ್ಪೇಸ್ವಾಮಿ ವಂದಿಸಿದರು. ಅಕ್ಬರ್ ಸನ್ಮಾನ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಎರಡೂವರೆ ದಶಕದ ನಂತರ ಭೇಟಿಯಾದವರೂ ದೂರದೂರಿನಿಂದ ಬಂದ ಸ್ನೇಹಿತರ ಮಾತು ಹರಟೆ ತರಲೆ ನಡೆದೇ ಇತ್ತು. 90ರ ದಶಕದ ಹಾಡು ಸಿನಿಮಾ ಸಾಹಿತ್ಯ ಮೆಲುಕು ಹಾಕಲಾಯಿತು. ತರಗತಿ ಕೋಣೆ ಹೊಕ್ಕು ಕೂತಲ್ಲೇ ಕೂತು ಕಾಲಘಟ್ಟದಲ್ಲಿ ಹಿಂದೆ ಪ್ರಯಾಣಿಸಿ ಬಂದಂತಾಯಿತು. ನಂತರ ಸ್ನೇಹಿತರೆಲ್ಲ ಜೋಗಿಮಟ್ಟಿ ಗಿರಿಧಾಮಕ್ಕೆ ಊಟ, ಆಟ, ಹಾಡು, ಅನುಭವ ಹಂಚಿಕೆ ಮುಂತಾದ ಚಟುವಟಿಕೆಗಳಿಗಾಗಿ ತೆರಳಿದರು.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon