ಹಿಂದಿ ಕಿರುತೆರೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ ಡಾಲಿ ಸೋಹಿ (48) ವಿಧಿವಶರಾಗಿದ್ದಾರೆ.
ಈ ನೋವು ಮಾಸುವ ಮುನ್ನವೇ, ಅವರ ಸಹೋದರಿ ಅಮನದೀಪ್ ಸೋಹಿ ಕೂಡ ಜಾಂಡೀಸ್‌ನಿಂದ ಮೃತಪಟ್ಟಿದ್ದಾರೆ. ಇಬ್ಬರೂ ನಟರೇ ಆಗಿರುವುದರಿಂದ ಹಿಂದಿ ಕಿರುತೆರೆಗೆ ಆಘಾತವಾಗಿದೆ.
ಡಾಲಿ ಸೋಹಿ ಅವರು ಬಡ್ತಮೀಜ್ ದಿಲ್ ಚಿತ್ರದ ಪಾತ್ರಕ್ಕಾಗಿ ನಟಿ ಹೆಚ್ಚು ಹೆಸರುವಾಸಿಯಾಗಿದ್ದರು.