ಒಡಿಶಾ ಭೀಕರ ತ್ರಿವಳಿ ರೈಲು ದುರಂತದ ಹಿಂದಿನ ರಹಸ್ಯ ಬಯಲು – 293ಕ್ಕೂ ಹೆಚ್ಚು ಜನರ ಬಲಿಗೆ ಕಾರಣವಾಗಿದ್ದು ಏನು?

ನವದೆಹಲಿ : ಕಳೆದ ಜೂನ್‌ನಲ್ಲಿ ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ʻಭೀಕರ ತ್ರಿವಳಿ ರೈಲು ಅಪಘಾತದ ಹಿಂದಿನ ರಹಸ್ಯ ಬಯಲಾಗಿದೆ. ರೈಲು ಸಚಿವಾಲಯ 293 ಕ್ಕೂ ಹೆಚ್ಚು ಪ್ರಯಾಣಿಕರ ಸಾವಿಗೆ ಕಾರಣವಾಗಿರುವ ಘಟನೆ ಕುರಿತು ಸಮಗ್ರ ವರದಿಯನ್ನು ಬಿಡುಗಡೆ ಮಾಡಿದೆ. ಹೌದು, ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ದುರಂತಕ್ಕೆ ‘ಸಿಗ್ನಲ್ ದೋಷ ಕಾರಣʼ ಎಂದು ರೈಲ್ವೇ ಸಚಿವಾಲಯ ಮೊದಲ ಬಾರಿಗೆ ರೈಲ್ವೆ ಸುರಕ್ಷತಾ ಆಯುಕ್ತರ ವರದಿಯನ್ನು ಬಿಡುಗಡೆ ಮಾಡಿದೆ. ಈ ಭೀಕರ ದುರಂತದಲ್ಲಿ 293 ಕ್ಕೂ ಹೆಚ್ಚು ಸಾವುಗಳು ಮತ್ತು 1,000 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿತ್ತು. ಅಪಘಾತ ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಒಂದಾಗಿದೆ. ರಾಜ್ಯಸಭೆಯಲ್ಲಿ ಸಂಸದ ಡಾ ಜಾನ್ ಬ್ರಿಟ್ಟಾಸ್ ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ಬಹಿರಂಗಪಡಿಸಿದ ವರದಿಯು ಉತ್ತರ ಸಿಗ್ನಲ್ ಗೂಮ್ಟಿ ನಿಲ್ದಾಣದಲ್ಲಿ ಸಿಗ್ನಲಿಂಗ್ ಸರ್ಕ್ಯೂಟ್ ಬದಲಾವಣೆ ಮತ್ತು ಎಲೆಕ್ಟ್ರಿಕ್ ಲಿಫ್ಟಿಂಗ್ ಬ್ಯಾರಿಯರ್ ಅನ್ನು ಬದಲಾಯಿಸುವ ಸಿಗ್ನಲಿಂಗ್ ಕಾರ್ಯದ ಕಾರ್ಯಗತಗೊಳಿಸುವಿಕೆಯ ಸಮಯದಲ್ಲಿ ಲೋಪವಾಗಿದೆ. ಈ ದೋಷಗಳ ಪರಿಣಾಮವಾಗಿ ರಾಂಗ್ ಲೈನ್‌ಗೆ ಹಸಿರು ಸಿಗ್ನಲ್ ಪ್ರದರ್ಶಿಸಲಾಯಿತು. ಇದು ನಿಂತಿದ್ದ ಸರಕುಗಳ ರೈಲಿಗೆ ಡಿಕ್ಕಿಗೆ ಕಾರಣವಾಯಿತು ಎಂದು ವರದಿ ವಿವರಿಸಿದೆ. ಈ ಸಮಸ್ಯೆಗಳು ರೈಲ್ವೆ ಅಧಿಕಾರಿಗಳ ಕಡೆಯಿಂದ ನಿರ್ಲಕ್ಷ್ಯ ಲೋಪ ಎಂದು ಸಚಿವರು ಹೇಳಿದರು. ಇನ್ನು, ಅಪಘಾತದಲ್ಲಿ ಮೃತಪಟ್ಟ 41 ಪ್ರಯಾಣಿಕರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಸರ್ಕಾರ ಹೇಳಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement